ತೆಲಂಗಾಣದಲ್ಲಿ ಎಐಎಂಐಎಂ ನಾಯಕನಿಂದ ಗುಂಡಿನ ದಾಳಿ: ಮೂವರಿಗೆ ಗಾಯ

ಶುಕ್ರವಾರ ಸಂಜೆ ಆಡಿಲಾಬಾದ್ ಪಟ್ಟಣದಲ್ಲಿ ಕ್ರಿಕೆಟ್ ಆಡುವಾಗ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಜಗಳದ ನಂತರ ಎಐಎಂಐಎಂ ಗೆ ಸೇರಿದ್ದ ಮುಖಂಡನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ.

Published: 19th December 2020 02:10 PM  |   Last Updated: 19th December 2020 02:10 PM   |  A+A-


Posted By : Raghavendra Adiga
Source : The New Indian Express

ಅಡಿಲಾಬಾದ್: ಶುಕ್ರವಾರ ಸಂಜೆ ಆಡಿಲಾಬಾದ್ ಪಟ್ಟಣದಲ್ಲಿ ಕ್ರಿಕೆಟ್ ಆಡುವಾಗ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಜಗಳದ ನಂತರ ಎಐಎಂಐಎಂ ಗೆ ಸೇರಿದ್ದ ಮುಖಂಡನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ.

ಹುಡುಗರು ಆಟದ ವಿಚಾರದಲ್ಲಿ ಜಗಳವಾಡುತ್ತಿದ್ದ ವೇಳೆ ಅವರ ಪೋಷಕರು ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಅಡಿಲಾಬಾದ್   ಪುರಸಭೆಯ ಮಾಜಿ ಉಪಾಧ್ಯಕ್ಷ ಫಾರೂಕ್ ಅಹ್ಮದ್ ತಮ್ಮ ಪರವಾನಗಿ ಪಡೆದ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡೇಟಿನಿಂದ ಇಬ್ಬರಿಗೆ ಗಾಯಗಳಾಗಿದೆ. ಇನ್ನೊಂದು ಬಾರಿ ಫಾರೂಕ್ ಚಾಕುವಿನಿಂದ ಇರಿದ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಫಾರೂಕ್ ಎಷ್ಟು ಸುತ್ತು ಗುಂಡು ಹಾರಿಸಿದ್ದಾರೆಂದು ಇನ್ನೂ ಖಚಿತಪಟ್ಟಿಲ್ಲವಾದರೂ ಸೈಯದ್ ಸಮೀರ್‌ ಎನ್ನುವವರಿಗೆ ಎರಡು ಗುಂಡುಗಳು ತಾಕಿ ಗಾಯಗಳಾಗಿದೆ. ಇನ್ನು ಸೈಯದ್ ಮೌತಿಸಿನ್ ಎಂಬಾತನಿಗೆ ಸಹ ಗುಂಡೇಟಿನಿಂದ ಗಾಯವಾಗಿದೆ. ಇದಲ್ಲದೆ ಸೈಯದ್ ಮನ್ನನ್ ಎಂಬಾತಚಾಕು ಇರಿತದಿಂದ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಸಂತ್ರಸ್ತರು ಅಪಾಯದಿಂದ ಪಾರಾಗಿದ್ದಾರೆಮತ್ತು ಆರೋಪಿ ಫಾರೂಕ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರು ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಾರೆ.. ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸುವಂತೆ ನಾವು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ" ಎಂದು ಆಡಿಲಾಬಾದ್ ಎಎಸ್ಪಿ ರಾಜೇಶ್ ಚಂದ್ರ ಹೇಳಿದ್ದಾರೆ.

ಎಂಐಎಂನ ಆಡಿಲಾಬಾದ್ ಜಿಲ್ಲಾ ಮುಖ್ಯಸ್ಥರಾಗಿರುವ ಫಾರೂಕ್ ಅಹ್ಮದ್ ಮತ್ತು ಎದುರಾಳಿ ಪಕ್ಷದ ನಡುವಿನ ಹಳೆಯ ರಾಜಕೀಯ ಪೈಪೋಟಿ ಗುಂಡಿನ ದಾಳಿಗೆ ಕಾರಣವಾಯಿತು ಎಂಬ ಊಹೆ ಇದೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಫಾರೂಕ್ ಸ್ವತಂತ್ರ ಅಭ್ಯರ್ಥಿಯ ಎದುರು ಸೋತಿದ್ದರು. ಟಿಆರ್‌ಎಸ್ ಅಭ್ಯರ್ಥಿಯು ಅದೇ ವಾರ್ಡ್‌ನಿಂದ ಕಣದಲ್ಲಿದ್ದರು. ಇದರಿಂದಾಗಿ ತಮಗೆ ನಷ್ಟವಾಗಿದೆಎಂದು ಅವರು ಅಭಿಪ್ರಾಯಪಟ್ಟಿದ್ದು ಅಂದಿನಿಂದ, ಎರಡೂ ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. 

ಏತನ್ಮಧ್ಯೆ, ಶುಕ್ರವಾರ ಸಂಜೆ, ಕೆಲವು ಯುವಕರು ತಟಿಗುಡ ಪ್ರದೇಶದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆಟದ ನಡುವೆ ಎರಡೂ ಗುಂಪುಗಳು ಸಾಕಷ್ಟು ವಿಷಯದ ಬಗ್ಗೆ ತೀವ್ರವಾದ ವಾಗ್ವಾದಕ್ಕೆ ಇಳಿದಿವೆ. . ಅವರು ಇನ್ನೂ ವಾದಿಸುತ್ತಿದ್ದಂತೆ, ಎರಡೂ ಗುಂಪುಗಳ ಯುವಕರ ಮನೆಯವರು ಸ್ಥಳಕ್ಕೆ ಧಾವಿಸಿ ಜಗಳವಾಡಲು ಪ್ರಾರಂಭಿಸಿದರು. 

ಈ ಸಮಯದಲ್ಲಿ ಇದ್ದಕ್ಕಿದ್ದಂತೆ, ಫಾರೂಕ್ ತನ್ನಪಿಸ್ತೂಲ್ ಹೊರತೆಗೆದು ಗುಂಡು ಹಾರಿಸಿದ್ದಾರೆ. ವಾಗ್ವಾದ ನಡೆಯುತ್ತಿರುವಾಗ, ಅವರು ಚುನಾವಣಾ ವಿಷಯದ ಬಗ್ಗೆ ಜಗಳಕ್ಕೆ ನಿಂತಿದ್ದರು. ಇತರ ಪಕ್ಷಕ್ಕೆ ಸೋಲು ಕಾಣಿಸಿದ್ದಾರೆ ಎಂದು ಹೇಳಲಾಗಿದ್ದು ಜಗಳ ಮುಂದುವರಿದಂತೆ ಫಾರೂಕ್ ತನ್ನ ಪಿಸ್ತೂಲ್ ನಿಂದ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲಾರಂಭಿಸಿದ್ದಾರೆ.  ಜಗಳಕ್ಕೆ ಕಾರಣವಾದ ಇತರ ಗುಂಪನ್ನು ಪ್ರಚೋದಿಸುವಲ್ಲಿ ಇತರ ವ್ಯಕ್ತಿಗಳ ಪಾತ್ರವನ್ನು ಪೋಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp