ನವ ಭಾರತ ಆಕ್ರಮಣಶೀಲತೆಯನ್ನು ಸಹಿಸದು: ಚೀನಾಗೆ ರಾಜನಾಥ್ ಸಿಂಗ್ ಎಚ್ಚರಿಕೆ

ನವ ಭಾರತ ಯಾವುದೇ ಘರ್ಷಣೆ, ಆಕ್ರಮಣಶೀಲತೆಯನ್ನು ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 
ದುಂಡಿಗಲ್ ವಾಯುನೆಲೆಯಲ್ಲಿ ನಡೆದ ಗ್ರಾಜುಯೇಷನ್ ಪರೇಡ್ ನಲ್ಲಿ ರಾಜನಾಥ್ ಸಿಂಗ್
ದುಂಡಿಗಲ್ ವಾಯುನೆಲೆಯಲ್ಲಿ ನಡೆದ ಗ್ರಾಜುಯೇಷನ್ ಪರೇಡ್ ನಲ್ಲಿ ರಾಜನಾಥ್ ಸಿಂಗ್

ದುಂಡಿಗಲ್​: ನವ ಭಾರತ ಯಾವುದೇ ಘರ್ಷಣೆ, ಆಕ್ರಮಣಶೀಲತೆಯನ್ನು ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 

ದುಂಡಿಗಲ್ ವಾಯುನೆಲೆಯಲ್ಲಿ ನಡೆದ ಗ್ರಾಜುಯೇಷನ್ ಪರೇಡ್ ನಲ್ಲಿ ಭಾಗಿಯಾಗಿ ಮಾತನಾಡಿ, ಪರೋಕ್ಷವಾಗಿ ಚೀನಾಗೆ ರಾಜನಾಥ್ ಸಿಂಗ್ ಎಚ್ಚರಿಕೆ ರವಾನೆ ಮಾಡಿದ್ದಾರೆ. ಮೂಲ ಉದ್ದೇಶ ಮಾತುಕತೆಯೇ ಆಗಿದ್ದರೂ ಭಾರತ ಘರ್ಷಣೆ ಹಾಗೂ ಅತಿಕ್ರಮಣಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್-19 ರ ಸಂಕಷ್ಟದ ಅವಧಿಯಲ್ಲೂ ಚೀನಾದ ವರ್ತನೆ ಅದರ ಅಗ್ಗದ ಉದ್ದೇಶಗಳನ್ನು ಬಹಿರಂಗಪಡಿಸಿತ್ತು, ಆದರೆ ಭಾರತ ದುರ್ಬಲ ರಾಷ್ಟ್ರವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಇದು ನವ ಭಾರತ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ಇದೇ ವೇಳೆ ಪಾಕಿಸ್ತಾನದ ವಿರುದ್ಧವೂ ಹರಿಹಾಯ್ದಿರುವ ರಾಜನಾಥ್ ಸಿಂಗ್, ನಾಲ್ಕು ಯುದ್ಧಗಳನ್ನು ಸೋತ ಬಳಿಕವೂ ಪಾಕಿಸ್ತಾನ ಬುದ್ಧಿ ಕಲಿಯದೇ ಭಾರತದ ವಿರುದ್ಧ ಭಯೋತ್ಪಾದನೆ ಮೂಲಕ ಛದ್ಮವೇಷದ ಯುದ್ಧ ನಡೆಸುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ತರಬೇತಿ ಪಡೆದವರಿಗೆ ಪ್ರೆಸಿಡೆಂಟ್ಸ್ ಕಮಿಷನ್ ನ್ನು ಹಸ್ತಾಂತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com