ಕೃಷಿ ಸುಧಾರಣೆಗಳಿಂದ ಈಗಾಗಲೆ ರೈತರಿಗೆ ಲಾಭವಾಗತೊಡಗಿದೆ: ಪ್ರಧಾನಿ ಮೋದಿ

 ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಆರು ತಿಂಗಳ ಹಿಂದೆ ತಮ್ಮ ಸರ್ಕಾರ ತಂದ ಸುಧಾರಣೆಗಳಿಂದ ಈಗಾಗಲೇ  ರೈತರಿಗೆ ಲಾಭವಾಗತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಆರು ತಿಂಗಳ ಹಿಂದೆ ತಮ್ಮ ಸರ್ಕಾರ ತಂದ ಸುಧಾರಣೆಗಳಿಂದ ಈಗಾಗಲೇ  ರೈತರಿಗೆ ಲಾಭವಾಗತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅಸೋಚಾಮ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಆರು ವರ್ಷಗಳಲ್ಲಿ ಭಾರತವು ಹೂಡಿಕೆಗೆ ವಿಶ್ವದ ಆದ್ಯತೆಯ ತಾಣವಾಗಿ ಹೊರಹೊಮ್ಮಿದೆ ಎಂದು ಹೇಳಲು ಉತ್ಪಾದನಾ ವಲಯದಿಂದ ಕಾರ್ಮಿಕರವರೆಗೆ ವ್ಯಾಪಿಸಿರುವ ಸುಧಾರಣೆಗಳನ್ನು ಪ್ರಮುಖ ಅಂಶವಾಗಿ ಹೇಳಿದರು.

ಕೋವಿಡ್- 19 ಸಾಂಕ್ರಾಮಿಕ ಸಮಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ (ಎಫ್‌ಪಿಐ) ದಾಖಲೆಯಾಗಿದ್ದು, ಜಗತ್ತು ಈಗ ಭಾರತದಲ್ಲಿ ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು. ಆರು ತಿಂಗಳ ಹಿಂದೆಯೇ ಪ್ರಾರಂಭಿಸಲಾದ ಕೃಷಿ ಸುಧಾರಣೆಗಳು ರೈತರಿಗೆ ಪ್ರಯೋಜನವನ್ನು ನೀಡಲು ಪ್ರಾರಂಭಿಸಿವೆ ಎಂದು ಅವರು ಸ್ಥೂಲವಾಗಿ ಹೇಳಿದರು.

ಕನಿಷ್ಠ ಬೆಂಬಲ ಬೆಲೆಯನ್ನು ನಿಲ್ಲಿಸಲಾಗುತ್ತಿದೆ ಎಂಬ ಭೀತಿಯಿಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದಂತಹ ನೂರಾರು ರೈತರು ದೆಹಲಿಗೆ ಹೋಗುವ ಕೆಲವು ಹೆದ್ದಾರಿಗಳನ್ನು ಮೂರು ವಾರಗಳಿಗಿಂತ ಹೆಚ್ಚು ಕಾಲ ನಿರ್ಬಂಧಿಸಿದ್ದಾರೆ. ಆದಾಗ್ಯೂ, ಮೂರು ಹೊಸ ಕಾನೂನುಗಳು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತವೆ ಮತ್ತು ಬೆಳೆಗಾರರಿಗೆ ಖಾಸಗಿ ಕಂಪನಿಗಳೊಂದಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತವೆ ಸರ್ಕಾರ ಹೇಳುತ್ತಿದೆ.

ಇದು ರೈತರಿಗೆ ಬೆಳೆಗಳನ್ನು ಮಾರಾಟ ಮಾಡಲು, ಆದಾಯವನ್ನು ಹೆಚ್ಚಿಸಲು ಪರ್ಯಾಯ ಮಾರ್ಗಕ್ಕೆ ಅವಕಾಶವಾಗಿದೆ ಮತ್ತು ಕೃಷಿಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಗುರಿಯನ್ನು ಹೊಂದಿದೆ ಎಂದು ಅದು ಹೇಳುತ್ತದೆ.ಅಲ್ಲದೆ, ಹೊಸ ಕಾನೂನುಗಳು ಎಂಎಸ್ ಪಿ ಆಧಾರಿತ ಖರೀದಿಯನ್ನುಅಂತ್ಯಗೊಳಿಸಲ್ಲ ಮತ್ತು ಮಂಡಿಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಸರ್ಕಾರ ಹಲವಾರು ಬಾರಿ ಒತ್ತಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com