ಕಂದಹಾರ್ ನಲ್ಲಿ ಆಫ್ಫನ್ ಪಡೆಗಳಿಂದ 74 ಉಗ್ರರ ಹತ್ಯೆ 

ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಕಂದಹಾರ್ ಪ್ರಾಂತ್ಯದ ಝೆರಿಯಾ, ದಂಡ್, ಪಾಂಜ್ವೆ ಮತ್ತು ಅರ್ಗನ್‍ದಾಬ್ ಜಿಲ್ಲೆಗಳಲ್ಲಿ ನಡೆದ ದಾಳಿಗಳಲ್ಲಿ ಕನಿಷ್ಠ 74 ಉಗ್ರರು ಹತರಾಗಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ. 

ಆಫ್ಘನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು ನೆಲೆಗಳ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಆಫ್ಘನ್ ರಾಷ್ಟ್ರೀಯ ಸೇನೆ ನಡೆಸಿದ ಕಾರ್ಯಾಚರಣೆಗಳ ವೇಳೆ ಘರ್ಷಣೆಗಳು ನಡೆದಿವೆ ಎಂದಿರುವ ಸಚಿವಾಲಯ, ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com