ಪ್ರಧಾನಿ ಮೋದಿ ನಾಯಕತ್ವದ ಕೌಶಲ್ಯದ ಬಗ್ಗೆ ರತನ್ ಟಾಟಾ ಪ್ರಶಂಸೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಕೌಶಲ್ಯವನ್ನು ಉದ್ಯಮ ದಿಗ್ಗಜ ರತನ್ ಟಾಟಾ ಶ್ಲಾಘಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ದೇಶವನ್ನು ಮೋದಿ ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
ರತನ್ ಟಾಟಾ-ಮೋದಿ
ರತನ್ ಟಾಟಾ-ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಕೌಶಲ್ಯವನ್ನು ಉದ್ಯಮ ದಿಗ್ಗಜ ರತನ್ ಟಾಟಾ ಶ್ಲಾಘಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ದೇಶವನ್ನು ಮೋದಿ ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ  ರತನ್ ಟಾಟಾ ನನ್ನ ಉದ್ಯಮ ವ್ಯವಹಾರ ಅವಧಿಯಲ್ಲಿ, ನಮ್ಮ ಪ್ರಧಾನಿ ಏನು ಮಾಡಬೇಕು ಎಂದು ಬಯಸಿದ್ದರು, ಅತ್ಯಂತ ಸಂಕಷ್ಟದ ಸಾಂಕ್ರಾಮಿಕ ಸಮಯದಲ್ಲಿ, ಆರ್ಥಿಕ ಸ್ಥಿತಿ ಕುಸಿಯುವ ಸಮಯದಲ್ಲಿ ಅವರು ನೀಡಿದ ನಾಯಕತ್ವದ ಬಗ್ಗೆ ನನಗೆ ಗೌರವವಿದೆ. ನೀವು ಯಾವುದೇ ನಿರ್ಧಾರ ಕೈಗೊಳ್ಳಲು ಹಿಂಜರಿಯಲಿಲ್ಲ, ಸಮಸ್ಯೆಗಳಿಂದ ಪಲಾಯನವಾಗಲಿಲ್ಲ, ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದೀರಿ ಎಂದು ಟಾಟಾ, ಮೋದಿ ಅವರಿಗೆ ಹೇಳಿದರು.

ಮೋದಿ ನಾಯಕತ್ವಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಇರಬೇಕು ಪ್ರತಿಪಕ್ಷಗಳು, ಅಸಮಾಧಾನ ಎನ್ನುವುದು  ಇರುತ್ತದೆ.  ಆದರೆ, ಯಾವುದೇ ಹಿಂಜರಿಕೆ ಹಾಗೂ ಸಮಸ್ಯೆಗೆ ಬೆನ್ನು ತಿರುಗಿಸದೆ ಲಾಕ್ ಡೌನ್ ವಿಧಿಸಿದರು. ದೇಶಾದ್ಯಂತ ಕೆಲ ನಿಮಿಷಗಳ ಕಾಲ ದೀಪ ಬೆಳಗಬೇಕು ಎಂದು ಜನತೆಯನ್ನು ಕೋರಿದ್ದರು. ಅದು ನಡೆಯುವಂತೆ ಮಾಡಿದರು. ಇದರಲ್ಲಿ ಯಾವುದೇ ನಾಟಕೀಯತೆ ಇಲ್ಲ. ಇಂತಹ  ಕ್ರಿಯೆಗಳು ನಮ್ಮ ದೇಶವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.

ಸಮರ್ಥ ನಾಯಕತ್ವದಿಂದ ದೇಶಕ್ಕಾಗುವ ಪ್ರಯೋಜನಗಳನ್ನು ಹೇಳುವುದು ಉದ್ಯಮ ವಲಯದ ಜವಾಬ್ದಾರಿಯಾಗಿದೆ. ನಾವು ಆ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ನಾನು ನೋಡಿದಂತೆ, ಭಾರತ ಒಗ್ಗೂಡಿದಾಗ ಅದ್ಭುತಗಳನ್ನು ನಡೆದಿವೆ. ಈ ಸಂಕಷ್ಟದ ಸಮಯದಲ್ಲಿ ದೇಶವನ್ನು ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ನಿಂತು, ನೀವು ಹೇಳುವದನ್ನು ಅನುಸರಿಸಿದರೆ ಖಂಡಿತ  ದೇಶಕ್ಕೆ ಒಳಿತಾಗಲಿದೆ ಎಂದು ರತನ್ ಟಾಟಾ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com