ರೈತರ ಪ್ರತಿಭಟನೆ ಕುರಿತ ಚರ್ಚೆ ತಪ್ಪಿಸಲು ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದು- ಸಂಜಯ್ ರಾವತ್

 ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತ ಚರ್ಚೆಯನ್ನು ತಪ್ಪಿಸಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತ ಚರ್ಚೆಯನ್ನು ತಪ್ಪಿಸಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

ರೈತರ ಪ್ರತಿಭಟನೆ ಕುರಿತ ಚರ್ಚೆ ಹಾಗೂ ಸಂಸತ್ತಿನ ಅಧಿವೇಶನ ನಡೆಸಲು ಆಸಕ್ತಿ ಇಲ್ಲದ ನರೇಂದ್ರ ಮೋದಿ ಸರ್ಕಾರ ಸೆಂಟ್ರಲ್ ವಿಸ್ತಾ ಯೋಜನೆಗೆ 1 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವ ಅಗತ್ಯವೇನಿದೆ? ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನವೆಂಬರ್ 26 ರಿಂದ ದೆಹಲಿಯ ಗಡಿಯಲ್ಲಿ ಸಹಸ್ರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವುಗಳ ರದ್ದತಿಗೆ ಒತ್ತಾಯಿಸುತ್ತಿದ್ದಾರೆ. ಈ ವಿಚಾರದ ಮೇಲಿನ ಚರ್ಚೆಯಿಂದ ತಪ್ಪಿಸಿಕೊಳ್ಳಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ ಎಂದು ರವಾತ್ ಹೇಳಿದ್ದಾರೆ.

ಸಂಸತ್ತಿನ ನೂತನ ಕಟ್ಟಡ ನಿರ್ಮಾಣವನ್ನು ಪ್ರಶ್ನಿಸಿರುವ ರಾವತ್, ಈಗ ಇರುವ ಸಂಸತ್ ಅಧಿವೇಶನ ಚೆನ್ನಾಗಿದ್ದು, 50ರಿಂದ 75 ವರ್ಷಗಳ ಕಾಲ ಚೆನ್ನಾಗಿ ಕಾರ್ಯನಿರ್ವಹಿಸಬಹುದಿತ್ತು. ಹಿಂದಿನ ನಾಯಕರ ಪರಂಪರೆ ಮತ್ತು ನೆನಪುಗಳನ್ನು ನಾಶಪಡಿಸುತ್ತಿರುವುದರ ಬಗ್ಗೆ ಯಾರೂ ಕೂಡಾ ಚಿಂತಿಸುತ್ತಿಲ್ಲ.  ನಿಮ್ಮ ಸ್ವಂತ ವರ್ಚಸ್ಸಿಗಾಗಿ ಹೊಸ ಕಟ್ಟಡ ನಿರ್ಮಾಣ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ ಎಂದು ರವಾತ್ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com