ಬಂಗಾಳದಲ್ಲಿ ಸಂಚಲನ ಸೃಷ್ಟಿಸಿದ ಅಮಿತ್ ಶಾ: 10 ಶಾಸಕರು ಸೇರಿ 13 ನಾಯಕರು ಬಿಜೆಪಿಗೆ ಸೇರ್ಪಡೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳಕ್ಕೆ ಭೇಟಿ ನೀಡಿದ್ದು ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಟಿಎಂಸಿ, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಎಂ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಕೊಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳಕ್ಕೆ ಭೇಟಿ ನೀಡಿದ್ದು ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಟಿಎಂಸಿ, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಎಂ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಮಿಡ್ನಾಪುರದಲ್ಲಿ ನಡೆದ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪರಮಾಪ್ತ ಸುವೆಂದು ಅಧಿಕಾರಿಯೂ ಸೇರಿದಂತೆ ಒಟ್ಟು 10 ಶಾಸಕರು. ಟಿಎಂಸಿಯಿಂದ 7, ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್ ನಿಂದ ತಲಾ ಒಬ್ಬರು, ಟಿಎಂಸಿ ಸಂಸದ, ಮಾಜಿ ಟಿಎಂಸಿ ಸಂಸದ ಮತ್ತು ಒಬ್ಬ ಮಾಜಿ ಟಿಎಂಸಿ ಸಚಿವರು ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 

ಇಷ್ಟೆ ಅಲ್ಲದೆ ಕನಿಷ್ಠ ಎರಡು ಡಜನ್ ಕಾರ್ಯಕರ್ತರು, ಹೆಚ್ಚಾಗಿ ಟಿಎಂಸಿಯಿಂದ, ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳ ಆರು ಮುಸ್ಲಿಂ ನಾಯಕರು ಸೇರಿದಂತೆ ಕಮಲದ ಕೈಹಿಡಿದಿದ್ದಾರೆ.

ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಪಶ್ವಿಮ ಬಂಗಾಳದಲ್ಲಿ ಸುನಾಮಿ ರೀತಿ ಬದಲಾವಣೆ ಕಂಡುಬರುತ್ತಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ 2021ರ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಜಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಯದ ವಾತಾವರಣ ಸೃಷ್ಟಿದ್ದಾರೆ ಎಂದು ಟೀಕಿಸಿರುವ ಅಮಿತ್ ಶಾ, ಚುನಾವಣೆ ವೇಳೆಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಬೆಂಗಾವಲು ಮೇಲೆ ದಾಳಿ ನಡೆಸಲಾಗಿದೆ. ಇಂತಹ ದಾಳಿಗಳಿಂದ ಬಿಜೆಪಿ ಬೆಳೆಯುತ್ತದ್ದಷ್ಟೇ ಎಂದು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಧೃತಿಗೆಡದೆ ಧೈರ್ಯದಿಂದ್ದಾರೆ. 

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸುವ ಭರವಸೆ ನೀಡಿದ್ದ ಮಮತಾ ಬ್ಯಾನರ್ಜಿ, ಅಪರಾಧಿಗಳನ್ನು ಮತ್ತು ಅಪರಾಧ ಆರೋಪ ಹೊತ್ತ ಸೋದರಳಿಯನನ್ನು ರಕ್ಷಿಸಿದ್ದಾರೆ. ಆಂಫಾನ್ ಚಂಡಮಾರುತ ಸಂತ್ರಸ್ಥರಿಗಾಗಿ ಕಳುಹಿಸಿದ ಪರಿಹಾರವನ್ನು ಟಿಎಂಸಿ 'ಗೂಂಡಾಗಳು' ಜೇಬಿಗೆ ಇಳಿಸಿದ್ದಾರೆ. ಇನ್ನು ಕೋವಿಡ್ -19 ಪರಿಹಾರ ಹಣವೂ ಸಹ ಜನರಿಗೆ ತಲುಪಿಲ್ಲ ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com