ವಿಶ್ವದರ್ಜೆ ವೈಜ್ಞಾನಿಕ ಪರಿಹಾರೋಪಾಯಗಳ ಸಾಧನೆಗೆ ಭಾರತದಲ್ಲಿ ಪೂರಕ ವಾತಾವರಣವಿದೆ: ಪ್ರಧಾನಿ ಮೋದಿ

ವಿಶ್ವ ದರ್ಜೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ಸಾಧಿಸಲು ಭಾರತ, ಅಗತ್ಯವಿರುವ ದತ್ತಾಂಶ, ಜನಸಂಖ್ಯೆ,ಬೇಡಿಕೆ ಹಾಗೂ ಪ್ರಜಾಪ್ರಭುತ್ವವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಿಶ್ವ ದರ್ಜೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ಸಾಧಿಸಲು ಭಾರತ, ಅಗತ್ಯವಿರುವ ದತ್ತಾಂಶ, ಜನಸಂಖ್ಯೆ,ಬೇಡಿಕೆ ಹಾಗೂ ಪ್ರಜಾಪ್ರಭುತ್ವವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಭಾರತ ಅಂತಾರಾಷ್ಟ್ರೀಯ ವಿಜ್ಞಾನೋತ್ಸವ(ಐಐಎಸ್ಎಫ್) 2020 ನ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ, ‘ವಿಶ್ವ ದರ್ಜೆಯ ಶಿಕ್ಷಣ, ಆರೋಗ್ಯ, ಸಂಪರ್ಕ ಮತ್ತು ಗ್ರಾಮೀಣ ಪರಿಹಾರೋಪಾಯಗಳನ್ನು ಸಾಧಿಸಲು ಭಾರತ ಇದೀಗ ದತ್ತಾಂಶ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಹೊಂದಿದೆ. 

ಎಲ್ಲಕ್ಕಿಂತ ಮುಖ್ಯವಾಗಿ ಭಾರತ, ಈ ಎಲ್ಲವನ್ನು ಸಮತೋಲನಗೊಳಿಸಲು ಮತ್ತು ರಕ್ಷಿಸಲು ಸದೃಢ ಪ್ರಜಾಪ್ರಭುತ್ವವನ್ನು ಹೊಂದಿದೆ. ಇದರಿಂದಲೇ ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ.'ಎಂದು ಹೇಳಿದ್ದಾರೆ.

ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳಲ್ಲಿ ಭಾರತ, ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಮ್ಮ ವಿಜ್ಞಾನಿಗಳು ಮಹೋನ್ನತ ಸಂಶೋಧನೆಗಳನ್ನು ಮಾಡಿದ್ದಾರೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ತಂತ್ರಜ್ಞಾನ ಉದ್ಯಮ ಮುಂಚೂಣಿಯಲ್ಲಿದೆ. ಆದರೂ ಭಾರತ ಇನ್ನೂ ಹೆಚ್ಚಿನದನ್ನು ಸಾಧಿಸುವ ಇಚ್ಛೆ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com