ಅಜಂ ಖಾನ್ ಪತ್ನಿಗೆ ಜಾಮೀನು: 10 ತಿಂಗಳ ನಂತರ ಜೈಲಿನಿಂದ ಬಿಡುಗಡೆ

ಫೋರ್ಜರಿ ಕೇಸಿ ನಲ್ಲಿ ಬಂಧನಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪತ್ನಿ ಹಾಗೂ ಶಾಸಕಿ ತಂಜೀನ್ ಫಾತಿಮಾ 10 ತಿಂಗಳ ನಂತರ ಜಾಮೀನಿನ ಮೇಲೆ ಸೋಮವಾರ ಬಿಡುಗಡೆಯಾಗಿದ್ದಾರೆ.
ತಂಜೀನ್ ಫಾತಿಮಾ
ತಂಜೀನ್ ಫಾತಿಮಾ

ಸೀತಾಪುರ್: ಫೋರ್ಜರಿ ಕೇಸಿ ನಲ್ಲಿ ಬಂಧನಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪತ್ನಿ ಹಾಗೂ ಶಾಸಕಿ ತಂಜೀನ್ ಫಾತಿಮಾ 10 ತಿಂಗಳ ನಂತರ ಜಾಮೀನಿನ ಮೇಲೆ ಸೋಮವಾರ ಬಿಡುಗಡೆಯಾಗಿದ್ದಾರೆ.

ಅಜಂಖಾನ್ ಪತ್ನಿ ಮತ್ತು ಸಮಾಜವಾದಿ ಪಕ್ಷದ ಶಾಸಕಿ ತಂಜೀನ್ ಫಾತಿಮಾ ಬಿಡುಗಡೆಯಾಗಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಎಸ್ ಪಿ ಸರ್ವೋಚ್ಚ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.ಬಿಜೆಪಿಯ ಅನ್ಯಾಯದ ವಿರುದ್ಧ ನ್ಯಾಯಕ್ಕೆ ಜಯ ದೊರೆತಿದೆ ಎಂದು ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 21 ರಂದು ಫಾತಿಮಾ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

10 ತಿಂಗಳ ನಂತರ ನಾನು ಜೈಲಿನಿಂದ ಬಿಡುಗಡೆಯಾಗಿದ್ದೇನೆ, ನ್ಯಾಯಾಂಗಕ್ಕೆ ನಾನು ಋಣಿಯಾಗಿದ್ದೇನೆ, ನ್ಯಾಯಾಂಗದಿಂದ ನನಗೆ ನ್ಯಾಯ ಸಿಕ್ಕಿದೆ  ಫಾತಿಮಾ ತಿಳಿಸಿದ್ದಾರೆ. ಜೈಲಿನಲ್ಲಿ ನನಗೆ ಯಾವುದೇ ವಿಶೇಷ ಸೌಲಭ್ಯ ಸಿಕ್ಕಿರಲಿಲ್ಲ, ಅಜಂ ಖಾನ್ ಸಮಾಜವಾದಿ ಪಕ್ಷದ ಸಂಸದರಾಗಿದ್ದು, ಶಾಸಕ ಸ್ಥಾನದಿಂದ ತಂಜೀನ್ ಫಾತಿಮಾ ಅವರನ್ನು ಅಮಾನತು ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com