ಕೋವಾಕ್ಸಿನ್: 13 ಸಾವಿರ ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ, ಅರ್ಧ ದಾರಿ ದಾಟಿದ ಮೂರನೇ ಹಂತದ ಪ್ರಯೋಗ!

ಭಾರತ್ ಬಯೋಟೆಕ್ ಔಷಧೀಯ ಕಂಪನಿ ತಯಾರಿಸಿರುವ ಸ್ವದೇಶಿ ಕೋವಿಡ್-19 ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕಾಗಿ 26 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಅರ್ಧದಷ್ಟು ಅಂದರೆ ಸುಮಾರು 13 ಸಾವಿರ ಸ್ವಯಂ ಸೇವಕರ ಮೇಲೆ ಈಗಾಗಲೇ ಯಶಸ್ವಿಯಾಗಿ ಲಸಿಕೆ ಪ್ರಯೋಗಿಸಲಾಗಿದೆ.
ಕೋವಾಕ್ಸಿನ್
ಕೋವಾಕ್ಸಿನ್

ಹೈದ್ರಾಬಾದ್:  ಭಾರತ್ ಬಯೋಟೆಕ್ ಔಷಧೀಯ ಕಂಪನಿ ತಯಾರಿಸಿರುವ ಸ್ವದೇಶಿ ಕೋವಿಡ್-19 ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕಾಗಿ 26 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಅರ್ಧದಷ್ಟು ಅಂದರೆ ಸುಮಾರು 13 ಸಾವಿರ ಸ್ವಯಂ ಸೇವಕರ ಮೇಲೆ ಈಗಾಗಲೇ ಯಶಸ್ವಿಯಾಗಿ ಲಸಿಕೆ ಪ್ರಯೋಗಿಸಲಾಗಿದೆ. ಇದರೊಂದಿಗೆ ದೇಶದ ಹಲವೆಡೆ  ಕೋವಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಗುರಿ ಸಾಧನೆಯತ್ತ ಮುಂದಾಗಿದೆ. 

ದೇಶಾದ್ಯಂತ 26 ಸಾವಿರ ಸ್ವಯಂ ಸೇವಕರಿಗೆ ಲಸಿಕೆ ನೀಡುವ ಗುರಿಯೊಂದಿಗೆ  ನವೆಂಬರ್ ಮಧ್ಯಭಾಗದಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ ಆರಂಭವಾಯಿತು. ಇದು ದೇಶದ ಮೊದಲ ಮತ್ತು ಮೂರನೇ  ಹಂತದ ಅತ್ಯಂತ ಪರಿಣಾಮಕಾರಿ ಕೋವಿಡ್- 19 ಲಸಿಕೆಯ ಅಧ್ಯಯನವಾಗಿದೆ. 

ಇದು ಭಾರತದಲ್ಲಿ ಇದುವರೆಗೆ ನಡೆದ ಅಭೂತಪೂರ್ವ ಲಸಿಕೆ ಪ್ರಯೋಗವಾಗಿದೆ ಮತ್ತು ಲಸಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅತೀವ ಸಂತೋಷವಾಗುತ್ತಿದೆ. ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಭಾರತೀಯ ಲಸಿಕೆಯನ್ನು ಹೊರತರುವಲ್ಲಿ ನಮಗೆ ಸಹಾಯ ಮಾಡಿದ  ಎಲ್ಲಾ 13000 ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿರುವ ಭಾರತ್ ಬಯೋಟೆಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಎಲಾ ಶೀಘ್ರದಲ್ಲಿಯೇ 26 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗುವುದು ಎಂದಿದ್ದಾರೆ.

ಈ ಹಿಂದಿನ ಹಂತ 1 ಮತ್ತು ಹಂತ 2ರ ಕ್ಲಿನಿಕಲ್ ಪ್ರಯೋಗಗಳಲ್ಲಿ ಅಂದಾಜು 1 ಸಾವಿರ ವಿಷಯಗಳಲ್ಲಿ ಕೋವಾಕ್ಸಿನ್ ದಕ್ಷತೆಯನ್ನು ಮೌಲ್ಯಮಾಪನ ಮಾಡಲಾಗಿತ್ತು.ಇದು ಸುರಕ್ಷತೆಯ ಭರವಸೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಯ ಫಲಿತಾಂಶ ನೀಡಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲಿಸಿದ ವೈಜ್ಞಾನಿಕ ನಿಯತಕಾಲಿಕಗಳಲ್ಲಿಯೂ ಈ ಪ್ರಯೋಗ ಸ್ವೀಕರಿಸಲ್ಪಟ್ಟಿತ್ತು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಭಾರತ್ ಬಯೋಟೆಕ್ ಕೊವಾಕ್ಸಿನ್ ದೇಶದ ಮೊದಲ ಲಸಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com