ಬ್ರಿಟನ್ ನಲ್ಲಿ ಕೊರೋನಾ ವೈರಸ್ ರೂಪಾಂತರ: ಲಸಿಕೆ ತಯಾರಿಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ!

ಮಾರಕ ಕೊರೋನಾ ರೂಪಂತರ ವೈರಸ್ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿರುವಂತೆಯೇ ಇತ್ತ ಭಾರತೀಯ ಲಸಿಕೆ ತಯಾರಕರು ಕೇಂದ್ರ ಸರ್ಕಾರಕ್ಕೆ ಹೊಸ ಬೇಡಿಕೆ ಮುಂದಿರಿಸಿದ್ದಾರೆ.
ಫಿಜರ್ ಲಸಿಕೆ
ಫಿಜರ್ ಲಸಿಕೆ

ನವದೆಹಲಿ: ಮಾರಕ ಕೊರೋನಾ ರೂಪಂತರ ವೈರಸ್ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿರುವಂತೆಯೇ ಇತ್ತ ಭಾರತೀಯ ಲಸಿಕೆ ತಯಾರಕರು ಕೇಂದ್ರ ಸರ್ಕಾರಕ್ಕೆ ಹೊಸ ಬೇಡಿಕೆ ಮುಂದಿರಿಸಿದ್ದಾರೆ.

ಭಾರತದಲ್ಲಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಕೋವಿಡ್ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮತ್ತೆ ಅರ್ಜಿ ಸಲ್ಲಿಕೆ ಮಾಡಿವೆ. ಅಪೆಕ್ಸ್ ಡ್ರಗ್ ರೆಗ್ಯುಲೇಟರ್ ಗೆ ಈ ಸಂಸ್ಥೆಗಳು ಪತ್ರ  ಬರೆದು ಮನವಿ ಮಾಡಿವೆ ಎನ್ನಲಾಗಿದೆ. 

ಭಾರತದಲ್ಲಿ ಎಸ್‌ಐಐ (ಸೆರಮ್ ಇನ್ಸ್ ಟಿಟ್ಯೂಟ್) ಮತ್ತು ಭಾರತ್ ಬಯೋಟೆಕ್ ಹೊರತುಪಡಿಸಿ, ಫಿಜರ್ ಕೂಡ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ್ದು, ಇದೀಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿವೆ.  ಈ ಹಿಂದೆ ಡಿಸೆಂಬರ್ 9 ರಂದು ಇತರ ಎರಡು ಕಂಪನಿಗಳ ಅರ್ಜಿಗಳನ್ನು ಮೌಲ್ಯಮಾಪನ ಮಾಡಿದ ನಂತರ, ಸಮಿತಿ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿಗೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ಕೋರಿತ್ತು. ಎಸ್‌ಐಐ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗಾಗಿ ತಾನು ಉತ್ಪಾದಿಸುವ ಯಾವುದೇ  ಪ್ರಮಾಣದಲ್ಲಿ ಶೇ.50 ಲಸಿಕೆಯನ್ನು ಕಾಯ್ದಿರಿಸಿದೆ.  

ಇದನ್ನು ಹೊರತು ಪಡಿಸಿ ಫಿಜರ್ ಸಂಸ್ಥೆ ಮಾತ್ರ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಷನ್‌ ನ ಕೋವಿಡ್ ತಜ್ಞರ ಸಮಿತಿಯ ಮುಂದೆ ವಿವರವಾದ ಪ್ರಸ್ತುತಿ ನೀಡಲು ಹೆಚ್ಚಿನ ಸಮಯವನ್ನು ಕೋರಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರು  ಮತ್ತು ನೀತಿ ಆಯೋಗದ ಸದಸ್ಯ ವಿ ಕೆ ಪಾಲ್ ಅವರು, 'ಎರಡು ಕಂಪನಿಗಳಲ್ಲಿ ಒಂದು ಸಂಸ್ಥೆ ಲಸಿಕೆಯ ದತ್ತಾಂಶವನ್ನು ಸಲ್ಲಿಸಿದೆ. ಈ ದತ್ತಾಂಶದ ಮೌಲ್ಯಮಾಪನ ಮಾಡುವಲ್ಲಿ ಔಷಧ ನಿಯಂತ್ರಕರು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಆ ಬಳಿಕ ತುರ್ತು ಬಳಕೆ ಕುರಿತು ನಿರ್ಧರಿಸುತ್ತಾರೆ ಎಂದು  ಹೇಳಿದರು. 

ಇದೇ ವೇಳೆ ಬ್ರಿಟನ್ ನಲ್ಲಿ ಹುಟ್ಟಿಕೊಂಡಿರುವ ಹೊಸ ಮತ್ತು ಹೆಚ್ಚು ಸಾಂಕ್ರಾಮಿಕ ಕೋವಿಡ್ ರೂಪಾಂತರ ವೈರಸ್ ಬಗ್ಗೆ ಭಯ ಬೇಡ ಎಂದು ಹೇಳಿರುವ ಪಾಲ್, ಸೂಕ್ತ ಮುಂಜಾಗ್ರತೆಯಿಂದ ಸೋಕು ತಡೆಯಬಹುದು. ರೂಪಾಂತರಿತ ವೈರಸ್ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪ್ರಸ್ತುತ  ಪುರಾವೆಗಳು ಸೂಚಿಸುತ್ತಿವೆ. ಯುಕೆಯಲ್ಲಿ ಕೋವಿಡ್-19ನ ಹೊಸ ಒತ್ತಡವು ಹರಡುವಿಕೆಯನ್ನು ಹೆಚ್ಚಿಸಿದೆ. ಈ ರೂಪಾಂತರವು ರೋಗದ ತೀವ್ರತೆಗೆ ಪರಿಣಾಮ ಬೀರುವುದಿಲ್ಲ. ಈ ರೂಪಾಂತರದಿಂದ ಸೋಂಕಿತರ ಮೇಲೆ ಮಾರಣಾಂತಿಕ ಪರಿಣಾಮ ಬೀರುವುದಿಲ್ಲ. ಇದು ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ  ಉದಯೋನ್ಮುಖ ಲಸಿಕೆಗಳ ಸಾಮರ್ಥ್ಯದ ಮೇಲೆ ಹೊಸ ರೂಪಾಂತರಿತ ವೈರಸ್ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಈ ಮಧ್ಯೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಸೆಪ್ಟೆಂಬರ್ ಮಧ್ಯದಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com