ಕೇಂದ್ರ ಚಲನಚಿತ್ರ ವಿಭಾಗಗಳನ್ನು ಅಭಿವೃದ್ಧಿ ನಿಗಮದ ಜತೆ ವಿಲೀನ: ಪ್ರಕಾಶ್ ಜಾವಡೇಕರ್

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ಮಾಧ್ಯಮ ಘಟಕಗಳನ್ನು ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ಮಾಧ್ಯಮ ಘಟಕಗಳನ್ನು ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಚಲನಚಿತ್ರ ವಿಭಾಗ, ಚಲನಚಿತ್ರೋತ್ಸವ ನಿರ್ದೇಶನಾಲಯ, ರಾಷ್ಟ್ರೀಯ ಚಲನಚಿತ್ರಗಳ ಭಂಡಾರ, ಮಕ್ಕಳ ಚಲನಚಿತ್ರ ಸೊಸೈಟಿಯನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.

ಡಿಟಿಎಚ್‌ ಸೇವೆಯ ಪರವಾನಗಿಗೆ ಪರಿಷ್ಕೃತಿ ಮಾರ್ಗಸೂಚಿ ಹೊರಡಿಸಲು ಸಂಪುಟ ಅನುಮೋದನೆ                                  ಮನೆಗೆ ನೇರ ಪ್ರಸಾರ ಸೇವೆ ಒದಗಿಸುವ ಡಿಟಿಚ್‌ ಸೇವೆಗೆ ಪರವಾನಗಿ ನೀಡುವ ಮಾರ್ಗಸೂಚಿಯನ್ನು ಪರಿಷ್ಕರಿಸುವ ಪ್ರಸ್ತಾವನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, ಡಿಟಿಎಚ್‌ ಪರವಾನಗಿಯನ್ನು ಈಗಿನ 10 ವರ್ಷಗಳ ಬದಲಿಗೆ 20 ವರ್ಷಗಳಿಗೆ ನೀಡಲಾಗುವುದು. ಪ್ರತಿ 10 ವರ್ಷಗಳಿಗೆ ಪರವಾನಗಿಯನ್ನು ನವೀಕರಿಸಲಾಗುವುದು ಎಂದರು. ಎಜಿಆರ್‌ನ ಪರವಾನಗಿ ಶುಲ್ಕವನ್ನು ಶೇ.10ರಿಂದ ಶೇ.8ಕ್ಕೆ ಇಳಿಸಲಾಗುವುದು. ಜಿಆರ್‌ ಇಂದ ಜಿಎಸ್‌ಟಿ ಅನ್ನು ಕಡಿತಗೊಳಿಸಿ ಎಜಿಆರ್‌ ಲೆಕ್ಕ ಹಾಕಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com