ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತ-ರಷ್ಯಾ ಶೃಂಗಸಭೆ ರದ್ದು, ಸುಳ್ಳಿನ ಮೂಲಕ ದಿಕ್ಕು ತಪ್ಪಿಸಬೇಡಿ: ಅನುರಾಗ್ ಶ್ರೀವಾಸ್ತವ

ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ-ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.
ರಾಹುಲ್-ಅನುರಾಗ್
ರಾಹುಲ್-ಅನುರಾಗ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ-ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.

ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಸಂಬಂಧಿಸಿದ ಮಾಧ್ಯಮ ವರದಿಗೆ ಪ್ರತಿಕ್ರಿಸಿರುವ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ,  ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ನಡೆಯುವುದಿಲ್ಲ ಎಂದರು.

ಇದು ಎರಡೂ ದೇಶಗಳ ಸರ್ಕಾರಗಳ ನಡುವೆ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿದೆ. ಈ ಕುರಿತ ತಪ್ಪುಗ್ರಹಿಕೆಯ ಯಾವುದೇ ವರದಿ ಸುಳ್ಳು ಮತ್ತು ದಿಕ್ಕು ತಪ್ಪಿಸುವುದಾಗಿದೆ. ಪ್ರಮುಖ ಸಂಬಂಧಗಳಲ್ಲಿ ಸುಳ್ಳು ಕಥೆಗಳನ್ನು ಹರಡುವುದು ತುಂಬಾ ಬೇಜವಾಬ್ದಾರಿತನದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ರದ್ದುಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 'ಸಾಂಪ್ರದಾಯಿಕ ಸಂಬಂಧಗಳಿಗೆ ಹಾನಿ' ಇದು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಟ್ವೀಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com