ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ: ಸ್ವಯಂ ಸೇವಕರಿಗಾಗಿ ಏಮ್ಸ್ ನಿಂದ ಜಾಹಿರಾತು!

ಸ್ವದೇಶದಲ್ಲಿಯೇ ತಯಾರಿಸಿರುವ ಕೋವಿಡ್-19 ಲಸಿಕೆ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗಕ್ಕಾಗಿ ಸ್ವಯಂ ಸೇವಕರಿಗಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಗುರುವಾರ ಜಾಹಿರಾತು ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸ್ವದೇಶದಲ್ಲಿಯೇ ತಯಾರಿಸಿರುವ ಕೋವಿಡ್-19 ಲಸಿಕೆ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗಕ್ಕಾಗಿ ಸ್ವಯಂ ಸೇವಕರಿಗಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಗುರುವಾರ ಜಾಹಿರಾತು ಹೊರಡಿಸಿದೆ.

ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ  ಸಹ ಪ್ರಯೋಜಕತ್ವದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ ನವದೆಹಲಿಯ ಏಮ್ಸ್ ನಲ್ಲಿ ನಡೆಯುತ್ತಿರುವುದಾಗಿ  ಜಾಹಿರಾತಿನಲ್ಲಿ ತಿಳಿಸಲಾಗಿದೆ. 

ಕೋವಾಕ್ಸಿನ್ ನ ಮೊದಲು ಹಾಗೂ ಎರಡನೇ ಹಂತದ ಪ್ರಯೋಗಗಳು ಈಗಾಗಲೇ ಪೂರ್ಣಗೊಂಡಿರುವುದಾಗಿ ಏಮ್ಸ್ ಸೆಂಟರ್ ಆಫ್ ಕಮ್ಯೂನಿಟಿ ಮೆಡಿಸನ್ ವಿಭಾಗದ ಡಾ. ಸಂಜಯ್ ಕೆ ರೈ ಜಾಹಿರಾತು ಮೂಲಕ ಮಾಹಿತಿ ನೀಡಿದ್ದಾರೆ.

ಕೋವಾಕ್ಸಿನ್ ಪ್ರಯೋಗದಲ್ಲಿ ಪಾಲ್ಗೊಳ್ಳಲು ಇಚ್ಚೆ ಹೊಂದಿದ್ದವರು ಆಸ್ಪತ್ರೆ ಆಡಳಿತ ವಿಭಾಗದ ಮೊಬೈಲ್ ನಂಬರ್ 7428847499 ಅಥವಾ ಇಮೇಲ್ ctaiims.covid19@gmail.com ಸಂಪರ್ಕಿಸಬಹುದಾಗಿದೆ. ಡಿಸೆಂಬರ್ 31 ನೋಂದಣಿಗೆ ಕಡೆಯ ದಿನವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com