ಕೃಷಿ ಕಾನೂನುಗಳು: ರಾಹುಲ್ ಗಾಂಧಿಗೆ ಬಹಿರಂಗ ಚರ್ಚೆಗೆ ಜಾವಡೇಕರ್ ಆಹ್ವಾನ

ನೂತನ ಕೃಷಿ ಕಾನೂನುಗಳನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಕೃಷಿ ಕಾನೂನುಗಳು ರೈತರ ಹಿತದೃಷ್ಟಿ ಹೊಂದಿದವೆಯೇ ಅಥವಾ ಇಲ್ಲವೋ ಎಂಬುದರ  ಬಗ್ಗೆ ಮುಕ್ತ ಚರ್ಚೆಗೆ ರಾಹುಲ್ ಗಾಂಧಿ ಮತ್ತು ಡಿಎಂಕೆ ಪಕ್ಷವನ್ನು ಆಹ್ವಾನಿಸಿದ್ದಾರೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ಚೆನ್ನೈ: ನೂತನ ಕೃಷಿ ಕಾನೂನುಗಳನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಕೃಷಿ ಕಾನೂನುಗಳು ರೈತರ ಹಿತದೃಷ್ಟಿ ಹೊಂದಿದವೆಯೇ ಅಥವಾ ಇಲ್ಲವೋ ಎಂಬುದರ  ಬಗ್ಗೆ ಮುಕ್ತ ಚರ್ಚೆಗೆ ರಾಹುಲ್ ಗಾಂಧಿ ಮತ್ತು ಡಿಎಂಕೆ ಪಕ್ಷವನ್ನು ಆಹ್ವಾನಿಸಿದ್ದಾರೆ.

ರೈತರನ್ನುದ್ದೇಶಿಸಿ ಮಾತನಾಡಿದ ಜಾವಡೇಕರ್, ನೂತನ ಕೃಷಿ ಕಾನೂನುಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇವುಗಳಿಗೆ ರೈತರ ಹಿತಸಕ್ತಿ ಇದೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ರಾಹುಲ್ ಗಾಂಧಿ ಮತ್ತು ಡಿಎಂಕೆ ಪಕ್ಷವನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವುದಾಗಿ ಹೇಳಿದರು.

ರೈತರ ಪ್ರತಿಭಟನೆಯನ್ನು ಸತ್ಯಾಗ್ರಹ ಎಂದು ಗುರುವಾರ ಕರೆದಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕಾನೂನುಗಳ ವಿರುದ್ಧ ರೈತರು ಬೆಂಬಲ ನೀಡುವಂತೆ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com