ಭೋಸ್ರಿ ಭೂ ವ್ಯವಹಾರ: ಬಿಜೆಪಿ ಮಾಜಿ ನಾಯಕ ಏಕನಾಥ್ ಖಡ್ಸೆಗೆ ಇಡಿ ಸಮನ್ಸ್
ಪುಣೆ ಸಮೀಪದ ಭೋಸ್ರಿಯಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇಡಿ) ನನಗೆ ಸಮನ್ಸ್ ನೀಡಿದೆ ಎಂದು ಬಿಜೆಪಿ ಮಾಜಿ ಮುಖಂಡ ಏಕನಾಥ್ ಖಡ್ಸೆ ಅವರು ಶನಿವಾರ ಹೇಳಿದ್ದಾರೆ.
Published: 26th December 2020 07:34 PM | Last Updated: 26th December 2020 07:34 PM | A+A A-

ಏಕನಾಥ್ ಖಡ್ಸೆ
ಮುಂಬೈ: ಪುಣೆ ಸಮೀಪದ ಭೋಸ್ರಿಯಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇಡಿ) ನನಗೆ ಸಮನ್ಸ್ ನೀಡಿದೆ ಎಂದು ಬಿಜೆಪಿ ಮಾಜಿ ಮುಖಂಡ ಏಕನಾಥ್ ಖಡ್ಸೆ ಅವರು ಶನಿವಾರ ಹೇಳಿದ್ದಾರೆ.
ಇ-ಮೇಲ್ ಮೂಲಕ ನನಗೆ ಇಡಿ ಸಮನ್ಸ್ ಬಂದಿದೆ. ಡಿಸೆಂಬರ್ 30 ರಂದು ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಖಡ್ಸೆ ಅವರು ಪಿಟಿಐಗೆ ತಿಳಿಸಿದ್ದಾರೆ.
ಈ ಭೂ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುಣೆ ಮತ್ತು ನಾಶಿಕ್ ನ ಎಸಿಬಿ ಘಟಕಗಳು ಹಾಗೂ ಆದಾಯ ತೆರಿಗೆ ಇಲಾಖೆ ನನ್ನ ಪತ್ರಿ ಮತ್ತು ಅಳಿಯನ ವಿರುದ್ಧ ತನಿಖೆ ನಡೆಸಿವೆ. ಆದರೆ ತನಿಖೆಯಲ್ಲಿ ಯಾವುದೇ ಅಕ್ರಮಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
2016ರಲ್ಲಿ ಇದೇ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಏಕನಾಥ್ ಖಡ್ಸೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚಿಗೆ ಬಿಜೆಪಿ ತೊರೆದು ಎನ್ ಸಿಪಿ ಸೇರಿದ್ದರು.