ಶಿವಸೇನೆ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಅಡಿ ಒಗ್ಗಟ್ಟಾಗಬೇಕು: ಸಾಮ್ನಾ

ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ "ದುರ್ಬಲ ಮತ್ತು ಅಸಂಘಟಿತವಾಗಿದೆ" ಎಂದಿರುವ ಶಿವಸೇನೆ ಮುಖವಾಣಿ 'ಸಾಮ್ನಾ', ಶಿವಸೇನಾ ಸೇರಿದಂತೆ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಬ್ಯಾನರ್ ನಡಿ ಒಗ್ಗಟ್ಟಾಗಬೇಕು ಎಂದು ಸೂಚಿಸಿದೆ.
ಶಿವಸೇನಾ ಸಂಸದ ಸಂಜಯ್ ರಾವತ್
ಶಿವಸೇನಾ ಸಂಸದ ಸಂಜಯ್ ರಾವತ್

ಮುಂಬೈ: ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ "ದುರ್ಬಲ ಮತ್ತು ಅಸಂಘಟಿತವಾಗಿದೆ" ಎಂದಿರುವ ಶಿವಸೇನೆ ಮುಖವಾಣಿ 'ಸಾಮ್ನಾ', ಶಿವಸೇನಾ ಸೇರಿದಂತೆ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಬ್ಯಾನರ್ ನಡಿ ಒಗ್ಗಟ್ಟಾಗಬೇಕು ಎಂದು ಸೂಚಿಸಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆ ತೋರುತ್ತಿದೆ ಮತ್ತು ಪ್ರತಿಪಕ್ಷಗಳು ದುರ್ಬಲವಾಗಿರುವುದೇ ಸರ್ಕಾರದ ನಿರಾಸಕ್ತಿಗೆ ಪ್ರಮುಖ ಕಾರಣ ಎಂದು ಹೇಳಿದೆ.

ಕೇಂದ್ರ ಸರ್ಕಾರವನ್ನು ದೂಷಿಸುವ ಬದಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ನಾಯಕತ್ವದ ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು 'ಸಾಮ್ನಾ' ಸಲಹೆ ನೀಡಿದೆ.

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಒಂದು ತಿಂಗಳಿಂದ ಸಾವಿರಾರು ರೈತರು ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದೆಹಲಿಯ ಆಡಳಿತಗಾರರು ಈ ಆಂದೋಲನದ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ಹೊಂದಿದ್ದಾರೆ. ಸರ್ಕಾರದ ಈ ಉದಾಸೀನತೆಗೆ ಅಸಂಘಟಿತ ಮತ್ತು ದುರ್ಬಲವಾದ ವಿರೋಧ ಪಕ್ಷಗಳೇ ಕಾರಣ. ಪರಿಣಾಮಕಾರಿಯಲ್ಲದ ವಿರೋಧವು ಈ ಪ್ರಜಾಪ್ರಭುತ್ವದ ವಿಘಟನೆಗೆ ಕಾರಣವಾಗಿದೆ" ಎಂದು ಸಾಮ್ನಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com