ನಿನ್ನೆ ಒಂದೇ ದಿನ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ 4.39 ಕೋಟಿ ರೂ. ಸಂಗ್ರಹ

ವೈಕುಂಠ ಏಕಾದಶಿಯ ದಿನವಾದ ನಿನ್ನೆ (ಡಿ 25ರ ಶುಕ್ರವಾರದಂದು) ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.  
ತಿರುಪತಿ ತಿರುಮಲ ದೇವಸ್ಥಾನ
ತಿರುಪತಿ ತಿರುಮಲ ದೇವಸ್ಥಾನ

ತಿರುಮಲ: ವೈಕುಂಠ ಏಕಾದಶಿಯ ದಿನವಾದ ನಿನ್ನೆ (ಡಿ 25ರ ಶುಕ್ರವಾರದಂದು) ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.  

ಒಟ್ಟು 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದು,  ಶ್ರೀವಾರಿ ಹುಂಡಿಯಲ್ಲಿ ದಾಖಲೆಯ 4.39 ಕೋಟಿ ರೂ. ಸಂಗ್ರಹವಾಗಿದೆ. 

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಅವಧಿ ಮುಗಿದ ಬಳಿಕ ಜೂನ್ 8 ರಿಂದ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಶ್ರೀವಾರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

 ನಂತರ ಸೆಪ್ಟೆಂಬರ್ 6 ರಂದು ಒಂದೇ ದಿನ ಹುಂಡಿಯಲ್ಲಿನ ಸಂಗ್ರಹ 1 ಕೋಟಿ ರೂ. ದಾಟಿತ್ತು. ಇದೀಗ ವೈಕುಂಠ ಏಕಾದಶಿ ದಿನದಿಂದು ಹುಂಡಿಯಲ್ಲಿ ಗರಿಷ್ಠ ಮೊತ್ತ 4.39 ಕೋಟಿ ರೂ. ಸಂಗ್ರಹವಾಗಿರುವುದು ದಾಖಲೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com