ಜಮ್ಮು-ಕಾಶ್ಮೀರ: ಸೇನೆಯ ಬ್ಯಾರಕ್ ಕುಸಿದು ಬಿದ್ದು ಇಬ್ಬರು ಯೋಧರು ಹುತಾತ್ಮ, ಒಬ್ಬರಿಗೆ ಗಾಯ 

ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ  ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.

ಕತುವಾ ಜಿಲ್ಲಾ ಕೇಂದ್ರದಿಂದ 150 ಕಿಲೋ ಮೀಟರ್ ದೂರದಲ್ಲಿ ಬಿಲ್ಲಾವರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಚ್ಚೆಡಿ ಎಂಬಲ್ಲಿ ಬ್ಯಾರಕ್ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಜಮ್ಮು-ಕಾಶ್ಮೀರ ಜಿಲ್ಲಾಡಳಿತ ತಿಳಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಸೇನಾ ಯೋಧರು ಬ್ಯಾರಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗೋಡೆ ಹಠಾತ್ತನೆ ಕುಸಿದುಬಿದ್ದು ಮೂವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಎಸ್ ಡಿ ಎಚ್ ಬಿಲ್ಲವರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧರನ್ನು ಸೋನಿಪತ್ ನ ಸುಬೇದರ್ ಎಸ್ ಎನ್ ಸಿಂಗ್ ಹಾಗೂ ಸಾಂಬಾದ ನಾಯಕ್ ಪರ್ವೇಝ್ ಕುಮಾರ್ ಎಂದು ಗುರುತಿಸಲಾಗಿದೆ. ಪಾಣಿಪತ್ ನ ಮತ್ತೊಬ್ಬ ಯೋಧ ಸೆಪೊಯ್ ಮಂಗಲ್ ಸಿಂಗ್ ಎಂಬುವವರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com