ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ನಾಳೆ ಮೋದಿ ಚಾಲನೆ

ದೇಶದ  ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದ  ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. 

ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಅವರು ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಪಿಎಂ ಮೋದಿ ಅವರು ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್ ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ʼನ್ನ ಕೂಡ ಅದೇ ದಿನ ಪ್ರಾರಂಭಿಸಲಿದ್ದಾರೆ ಎಂದೂ ಮೆಟ್ರೋ ನಿಗಮ ಹೇಳಿದೆ. 

ಮೆಟ್ರೋ ನಿಲ್ದಾಣಗಳಲ್ಲಿ ಕೊರೊನಾ ಸೋಂಕು  ಹಾವಳಿ ನಿಯಂತ್ರಿಸಲು ಪ್ರಯಾಣಿಕರಿಗೆ ಇನ್ನೂ ಟೋಕನ್ ಮಾರಾಟಕ್ಕೆ  ಅನುಮತಿ ನೀಡಲಾಗಿಲ್ಲ  ಸಾರ್ವಜನಿಕರು ಕ್ಯಾಶ್ ಲೆಸ್ ವಿಧಾನ ಬಳಸಿ ಕೋವಿಡ್-19ರ ವಿರುದ್ಧ ರಕ್ಷಣೆ ಪಡೆಯಲು ಸಲಹೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com