24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ ಅಬ್ದುಲ್ ಮಜೀದ್ ಕುಟ್ಟಿ ಬಂಧನ

ದೇಶದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತ್ ಎಟಿಎಸ್ ಬಂಧಿಸಿದೆ.

Published: 27th December 2020 03:17 PM  |   Last Updated: 27th December 2020 03:43 PM   |  A+A-


ATS

ಗುಜರಾತ್ ಎಟಿಎಸ್ ಅಧಿಕಾರಿಗಳು

Posted By : Vishwanath S
Source : Online Desk

ಜಾರ್ಜಂಡ್‌: ದೇಶದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತ್ ಎಟಿಎಸ್ ಬಂಧಿಸಿದೆ. 

ಮಜೀದ್ ಕಳೆದ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಬಂಧನಕ್ಕೊಳಗಾಗಿರುವ ಮಜೀದ್ ಉಗ್ರ ಡೇವಿಡ್ ನ ಅನೇಕ ರಹಸ್ಯಗಳನ್ನು ಬಿಚ್ಚಿಡಬಲ್ಲನೆಂದು ಹೇಳಲಾಗುತ್ತಿದೆ.

ಕುಟ್ಟಿ ಕೇರಳ ಮೂಲದವನು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. 1996ರಲ್ಲಿ 106 ಪಿಸ್ತೂಲ್, 750 ಕಾರ್ಟ್ರಿಜ್ಗಳು ಮತ್ತು ಸುಮಾರು 4 ಕೆಜಿ ಆರ್ಡಿಎಕ್ಸ್ ಸಂಗ್ರಹಿಸುವ ಅಪರಾಧದಲ್ಲಿ ಭಾಗಿಯಾಗಿದ್ದನು. ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು, ಈ ಪ್ರಕರಣ ಸಂಬಂಧ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಕುಟ್ಟಿ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಇದೀಗ  ಜಾರ್ಖಂಡ್ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದರು.

ನಮ್ಮ ಗುಪ್ತಚರ ಮೂಲಗಳಿಂದ ಅವರು ಇರುವ ಸ್ಥಳದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ನಮ್ಮ ತಂಡವನ್ನು ಜಾರ್ಖಂಡ್‌ಗೆ ಕಳುಹಿಸಿ ಬಂಧಿಸಲಾಯಿತು. ಎಟಿಎಸ್ ಪ್ರಕಾರ, ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಮತ್ತು ಅವರ ಗ್ಯಾಂಗ್ ಗುಜರಾತ್ ಮತ್ತು ಮುಂಬೈಯಲ್ಲಿ ಶಾಂತಿ ಕದಡುವ ಯೋಜನೆಯನ್ನು ಹೊಂದಿತ್ತು. ಅದಕ್ಕಾಗಿಯೇ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಆರ್ಡಿಎಕ್ಸ್ ಸಂಗ್ರಹಿಸಿದ್ದರು ಎಂದು ಹೇಳಿದೆ.

ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ ಆರೋಪಿಗಳನ್ನು ಪ್ರಶ್ನಿಸಿದಾಗ ಕುಟ್ಟಿ ಹೆಸರು ಬೆಳಕಿಗೆ ಬಂದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp