ಜಯಲಲಿತಾ,ಕರುಣಾನಿಧಿಯವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತಮಿಳು ನಾಡಿನಲ್ಲಿ ಮೋದಿಯವರು ತುಂಬಲಿದ್ದಾರೆ: ಕೆ.ಅಣ್ಣಾಮಲೈ
ತಮಿಳು ನಾಡು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಕರುಣಾನಿಧಿಯವರ ನಿಧನ ನಂತರ ಉಂಟಾಗಿರುವ ಶೂನ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮೂಲಕ ತುಂಬಲಿದ್ದಾರೆ ಎಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ಕೆ ಅಣ್ಣಾಮಲೈ ತಿಳಿಸಿದ್ದಾರೆ.
Published: 27th December 2020 08:02 AM | Last Updated: 27th December 2020 08:02 AM | A+A A-

ಕೆ. ಅಣ್ಣಾಮಲೈ
ಮೈಸೂರು: ತಮಿಳು ನಾಡು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಕರುಣಾನಿಧಿಯವರ ನಿಧನ ನಂತರ ಉಂಟಾಗಿರುವ ಶೂನ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮೂಲಕ ತುಂಬಲಿದ್ದಾರೆ ಎಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ಕೆ ಅಣ್ಣಾಮಲೈ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 53 ವರ್ಷ ಸ್ಥಳೀಯ ದ್ರಾವಿಡ ರಾಜಕೀಯದಿಂದ ತಮಿಳು ನಾಡು ಜನತೆ ಬೇಸತ್ತು ಹೋಗಿದ್ದು, ಬದಲಾವಣೆ ಬಯಸಿ ರಾಷ್ಟ್ರೀಯ ಪಕ್ಷದತ್ತ ಒಲವು ತೋರಿಸಲು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಾವು ಭಾವಿಸಿದ್ದೇವೆ. ಜನರ ಆಶೋತ್ತರಗಳು, ಆಕಾಂಕ್ಷೆಗಳು, ಈಡೇರದೆ ಇರುವ ಭರವಸೆಗಳನ್ನು ಬಿಜೆಪಿ ಸಾಕಾರಗೊಳಿಸಲಿದೆ ಎಂದು ಹೇಳಿದರು.
The vaccum created in #TamilNadu after death of #Jayalalitha and #Karunanidhi will be filled by @narendramodi says @annamalai_k
— Karthik Nayaka (@Karthiknayaka) December 26, 2020
Speaking at #Mysuru, he said TN people will turn to politics of nationalism, as they are fed up of Dravidian politics@XpressBengaluru @santwana99 pic.twitter.com/8tcJ3OUsvd