ಕೇಂದ್ರ ವಿರೋಧಿ ದೃಷ್ಟಿಕೋನದಿಂದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಮೇಲೆ ದಾಳಿ- ಮಮತಾ ಬ್ಯಾನರ್ಜಿ

 ಕೇಂದ್ರ ವಿರೋಧಿ ದೃಷ್ಟಿಕೋನದಿಂದಾಗಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಮೇಲೆ ಬಿಜೆಪಿಯಿಂದ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮರ್ತ್ಯ ಸೇನ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮರ್ತ್ಯ ಸೇನ್

ಬೊಲ್ಪುರ: ಕೇಂದ್ರ ವಿರೋಧಿ ದೃಷ್ಟಿಕೋನದಿಂದಾಗಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಮೇಲೆ ಬಿಜೆಪಿಯಿಂದ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

ಕ್ಯಾಂಪಸ್‌ನಲ್ಲಿ ಸೇನ್ ಕುಟುಂಬವು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ವಿಶ್ವವಿದ್ಯಾಲಯ ವಿಶ್ವ ಭಾರತಿ ತಿಳಿಸಿದ ನಂತರ ಕಳೆದ ಸೇನ್ ಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿ,ದುಃಖವನ್ನು ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರದ ವಿರುದ್ಧದ ದೃಷ್ಟಿಕೋನದಿಂದಾಗಿ ಅರ್ಮತ್ಯ ಸೇನ್ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ರಾಜಕೀಯ ದೃಷ್ಟಿಯಿಂದ ನನ್ನ ಮೇಲೆ ನಡೆಯುತ್ತಿರುವ ದಾಳಿಯಂತೆ ಅಮರ್ತ್ಯ ಸೇನ್ ಮೇಲೂ ದಾಳಿ ನಡೆಲಾಗುತ್ತಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಮಮತಾ ಬ್ಯಾನರ್ಜಿ ಅವರ ಸಹಕಾರಕ್ಕೆ  ಧನ್ಯವಾದ ಸಲ್ಲಿಸಿರುವ ಅಮರ್ತ್ಯ ಸೇನ್, ಆಕೆಯ ಸದೃಢ ಧ್ವನಿಯು, ಪ್ರಚಂಡ ಶಕ್ತಿಯ  ಮೂಲವಾಗಿದೆ ಎಂದಿದ್ದಾರೆ.ವಿಶ್ವ ಭಾರತಿ ಉಪಕುಲಪತಿ ಕೇಂದ್ರದ ಆಜ್ಞೆಯ ಮೇರೆಗೆ ಬಂಗಾಳದಲ್ಲಿ ನಿಯಂತ್ರಣ ಹೆಚ್ಚು ಮಾಡುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮರ್ತ್ಯ ಸೇನ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com