ರೈತರು ಮತ್ತು ಕೇಂದ್ರ ಸರ್ಕಾರದ ಮಧ್ಯೆ ನಾಳೆ ಮತ್ತೊಂದು ಸುತ್ತಿನ ಮಾತುಕತೆ: ಫಲಿಸಲಿದೆಯೇ ಸಂಧಾನ ಸೂತ್ರ?

ರೈತರ ಜೊತೆಗೆ ಮುಂದಿನ ಸುತ್ತಿನ ಮಾತುಕತೆಯನ್ನು ನಾಳೆ ನಡೆಸಲಿದ್ದು, 40 ಪ್ರತಿಭಟನಾ ನಿರತ ರೈತರ ಒಕ್ಕೂಟಗಳು ಭಾಗಿಯಾಗಲಿವೆ. ಆರಂಭದಲ್ಲಿ ಇಂದು ನಡೆಸಲುದ್ದೇಶಿಸಿದ್ದ ಮಾತುಕತೆಯನ್ನು ನಾಳೆಗೆ ಮುಂದೂಡಲಾಗಿದ್ದು, 7ನೇ ಸುತ್ತಿನ ಮಾತುಕತೆ ನಾಳೆ ನಡೆಯಲಿದೆ. 
ದೆಹಲಿಯ ಗಝಿಪುರ ಗಡಿಭಾಗದಲ್ಲಿ ನಿನ್ನೆ ರೈತರ ಪ್ರತಿಭಟನೆ
ದೆಹಲಿಯ ಗಝಿಪುರ ಗಡಿಭಾಗದಲ್ಲಿ ನಿನ್ನೆ ರೈತರ ಪ್ರತಿಭಟನೆ

ನವದೆಹಲಿ: ರೈತರ ಜೊತೆಗೆ ಮುಂದಿನ ಸುತ್ತಿನ ಮಾತುಕತೆಯನ್ನು ನಾಳೆ ನಡೆಸಲಿದ್ದು, 40 ಪ್ರತಿಭಟನಾ ನಿರತ ರೈತರ ಒಕ್ಕೂಟಗಳು ಭಾಗಿಯಾಗಲಿವೆ. ಆರಂಭದಲ್ಲಿ ಇಂದು ನಡೆಸಲುದ್ದೇಶಿಸಿದ್ದ ಮಾತುಕತೆಯನ್ನು ನಾಳೆಗೆ ಮುಂದೂಡಲಾಗಿದ್ದು, 7ನೇ ಸುತ್ತಿನ ಮಾತುಕತೆ ನಾಳೆ ನಡೆಯಲಿದೆ. 

ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಗೆ ಸೇರಲು ರೈತ ಒಕ್ಕೂಟಗಳು ತಾತ್ವಿಕವಾಗಿ ಒಪ್ಪಿಕೊಂಡಿವೆ ಆದರೆ ಸಭೆಯ ಕಾರ್ಯಸೂಚಿಯಲ್ಲಿ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಶಾಸನಗಳನ್ನು ರದ್ದುಗೊಳಿಸುವ ವಿಧಾನಗಳನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ನವೆಂಬರ್ 28ರಿಂದ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಇನ್ನಷ್ಟು ಮಂದಿ ಬೆಂಬಲ ಸೂಚಿಸಿ ಸೇರ್ಪಡೆಯಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ರೈತರ ಮಧ್ಯೆ ಯೋಜಿತ ರೀತಿಯಲ್ಲಿ ಸುಳ್ಳಿನ ಗೋಡೆ ರಚಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿಭಟನಾಕಾರರು ಸದ್ಯದಲ್ಲಿಯೇ ಸತ್ಯವನ್ನು ಅರಿತು ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಸದ್ಯದಲ್ಲಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ರೈತ ಸಂಘಟನೆಗಳಿಗೆ ಬರೆದಿರುವ ಪತ್ರದಲ್ಲಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ ವಾಲ್, ನಾಳೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಮಾತುಕತೆಗೆ ಆಹ್ವಾನಿಸಿದ್ದಾರೆ.

ಕಳೆದ ಬಾರಿ ಕೊನೆಯ ಬಾರಿ ಸರ್ಕಾರ ಮತ್ತು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆದಿದ್ದು ಡಿಸೆಂಬರ್ 5ರಂದು. ದೆಹಲಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ವಿಕಾಸ್ ಯಾದವ್ ನೇತೃತ್ವದಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಪ್ರತಿಭಟನೆ ನಡೆಯುತ್ತಿದೆ. 

ತಮ್ಮ ತೋಳು ಮತ್ತು ಮುಖದ ಮೇಲೆ ಘೋಷಣೆಗಳನ್ನು ಬರೆಯುವುದರೊಂದಿಗೆ, ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದ ರೈತ, ಇದು ಆಂದೋಲನದ ಕಡೆಗೆ ಸರ್ಕಾರದ ಗಮನವನ್ನು ಸೆಳೆಯಬಹುದು ಎಂದು ಅವರು ಭಾವಿಸಿದ್ದಾರೆ.

ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ. ಈ ಚಳಿ, ಶೀತಗಾಳಿಯಲ್ಲಿ ನಾವು ರಸ್ತೆಯಲ್ಲಿ ವಾಸಿಸುತ್ತಿದ್ದೇವೆ, ಆದರೆ ಯಾರೂ ಗಮನ ಹರಿಸುತ್ತಿಲ್ಲ. ಬಹುಶಃ ಈಗ ಅವರು ಹಾಗೆ ಮಾಡುತ್ತಾರೆ ”ಎಂದು ವಾರದ ಹಿಂದೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಾದವ್ ಹೇಳಿದ್ದಾರೆ. ಇನ್ನಾದರೂ ನಮ್ಮ ಮಾತನ್ನು ಕೇಳಬಹುದು ಎಂಬ ನಿರೀಕ್ಷೆಯಿದೆ ಎಂದು ವಿಕಾಸ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಕಳೆದೊಂದು ವಾರದಿಂದ ಮೌನವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾವಾದದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com