ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಸಂಕಷ್ಟ: ಆರ್ ಜೆಡಿಗೆ ಜೆಡಿ(ಯು) ಪಕ್ಷದ 17 ಶಾಸಕರು?

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ(ಜೆಡಿಯು) ಪಕ್ಷದ ಶಾಸಕರು, ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಸೇರಲಿದ್ದಾರೆ ಎಂದು ಆರ್ ಜೆ ಡಿ ನಾಯಕ ಶ್ಯಾಮ್ ರಜಾಕ್ ಹೇಳಿದ್ದಾರೆ.

Published: 30th December 2020 05:57 PM  |   Last Updated: 30th December 2020 05:57 PM   |  A+A-


Nitish Kumar

ನಿತೀಶ್ ಕುಮಾರ್

Posted By : Lingaraj Badiger
Source : UNI

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ(ಜೆಡಿಯು) ಪಕ್ಷದ ಶಾಸಕರು, ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಸೇರಲಿದ್ದಾರೆ ಎಂದು ಆರ್ ಜೆ ಡಿ ನಾಯಕ ಶ್ಯಾಮ್ ರಜಾಕ್ ಹೇಳಿದ್ದಾರೆ.

ಜೆಡಿ(ಯು)ಪಕ್ಷದ 17 ಶಾಸಕರು ಯಾವುದೇ ಕ್ಷಣದಲ್ಲಿ ಆರ್‌ಜೆಡಿ ಸೇರಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ, ತಾವು ಪಕ್ಷಾಂತರ ನಿಷೇಧ ಕಾಯ್ದೆ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ, 28 ಶಾಸಕರು ಒಗ್ಗೂಡಿ ಬಂದರೆ ಮಾತ್ರ ಪಕ್ಷವನ್ನು ಸೇರಲು ಆಹ್ವಾನಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

17 ಜೆಡಿ(ಯು) ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಆರ್‌ಜೆಡಿಗೆ ಸೇರಲು ಸಿದ್ಧರಾಗಿದ್ದಾರೆ. ಯಾವುದೇ ಕ್ಷಣದಲ್ಲಿ ಇದು ಸಂಭವಿಸಬಹುದು. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಂದಿನಿಂದಲೂ ನಾವು ಅದನ್ನು ಉಲ್ಲಂಘಿಸಿಲ್ಲ. ಆದರೆ, ನಾವು ಅವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದೇವೆ. 28 ಶಾಸಕರು ಏಕಕಾಲದಲ್ಲಿ ಬಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಶೀಘ್ರದಲ್ಲೇ ಈ ಸಂಖ್ಯೆ 28ಕ್ಕೆ ತಲುಪುವ ಸಾಧ್ಯತೆ ಇದೆ ”ಎಂದು ಶ್ಯಾಮ್ ರಜಾಕ್ ಹೇಳಿದ್ದಾರೆ.

ಆದರೆ, ರಜಾಕ್ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆರ್‌ಜೆಡಿ ಹೇಳಿಕೆಗಳು ಆಧಾರರಹಿತವಾಗಿದ್ದು, ತಮ್ಮ ಪಕ್ಷದ ಯಾವುದೇ ಶಾಸಕರು ಅನ್ಯ ಪಕ್ಷಕ್ಕೆ ಹೋಗುವ ಸಾಧ್ಯತೆ ಇಲ್ಲ. ಆರ್‌ಜೆಡಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು), ಆರ್‌ಜೆಡಿ ಹಾಗೂ ಬಿಜೆಪಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿದೆ. ವಾಸ್ತವವಾಗಿ, ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ, ಚುನಾವಣಾ ಒಪ್ಪಂದದಂತೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಆದರೆ, ಪ್ರತಿಪಕ್ಷಗಳು, ಜೆಡಿ(ಯು) ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂಬ ವದಂತಿಗಳಿವೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp