ಹೆಚ್ಚುತ್ತಿರುವ ರೂಪಾಂತರಿ ಕೊರೋನಾ ಸೋಂಕು: ಬ್ರಿಟನ್-ಭಾರತ ವಿಮಾನಗಳಿಗೆ ಜ.7 ವರೆಗೆ ನಿರ್ಬಂಧ ವಿಸ್ತರಣೆ

ರೂಪಾಂತರಿ ಕೊರೋನಾ ಸೋಂಕು ಪ್ರಕರಣಗಳು ಡಿ.30 ರಂದು 20ಕ್ಕೆ ಏರಿಕೆಯಾಗಿದ್ದು, ಜ.7 ರವರೆಗೆ ಬ್ರಿಟನ್-ಭಾರತ ನಡುವಿನ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ. 
ಹರದೀಪ್ ಸಿಂಗ್ ಪುರಿ
ಹರದೀಪ್ ಸಿಂಗ್ ಪುರಿ

ನವದೆಹಲಿ: ರೂಪಾಂತರಿ ಕೊರೋನಾ ಸೋಂಕು ಪ್ರಕರಣಗಳು ಡಿ.30 ರಂದು 20ಕ್ಕೆ ಏರಿಕೆಯಾಗಿದ್ದು, ಜ.7 ರವರೆಗೆ ಬ್ರಿಟನ್-ಭಾರತ ನಡುವಿನ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ. 

ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಟ್ವೀಟ್ ಮಾಡಿ, "ಬ್ರಿಟನ್-ಭಾರತ ನಡುವಿನ ವಿಮಾನಗಳನ್ನು ನಿರ್ಬಂಧಿಸಲು ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ. 

ನಿರ್ಬಂಧ ತೆರವುಗೊಳಿಸುವ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. 

ಬ್ರಿಟನ್ ನಿಂದ ಹರಡುತ್ತಿರುವ ರೂಪಾಂತರಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಭಾರತ ಬ್ರಿಟನ್ ನಿಂದ ಬರುವ ಹಾಗೂ ಬ್ರಿಟನ್ ಗೆ ತೆರಳುವ ವಿಮಾನಗಳಿಗೆ  ಡಿ.31 ವರೆಗೆ ನಿರ್ಬಂಧ ವಿಧಿಸಲಾಗಿತ್ತು. ಡಿ.29 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಹರ್ದೀಪ್ ಸಿಂಗ್ ನಿರ್ಬಂಧ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com