2020ರಲ್ಲಿ ಜಗತ್ತಿನಲ್ಲಿ 60, ಭಾರತದಲ್ಲಿ 8 ಪತ್ರಕರ್ತರ ಹತ್ಯೆ: ಐಎಫ್ ಜೆ

ವಿಶ್ವದಾದ್ಯಂತ 2020ರಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದು, ಈ ಪೈಕಿ ಭಾರತದಲ್ಲಿ ಕಾರ್ಯನಿರತ ಎಂಟು ಮಂದಿ ಬಲಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಶ್ವದಾದ್ಯಂತ 2020ರಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದು, ಈ ಪೈಕಿ ಭಾರತದಲ್ಲಿ ಕಾರ್ಯನಿರತ ಎಂಟು ಮಂದಿ ಬಲಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ ತಿಳಿಸಿದೆ.

ವಾರ್ಷಿಕ ವರದಿಯಂತೆ, 2020ನೇ ವರ್ಷ ಜಾಗತಿಕ ಸಾಂಕ್ರಾಮಿಕ ಬಿಕ್ಕಟ್ಟಿನ ವರ್ಷವಾಗಿ ಇತಿಹಾಸದಲ್ಲಿ ಕೊನೆಗೊಳ್ಳಲಿದೆ. ಅಲ್ಲದೆ ವಿಶ್ವದಾದ್ಯಂತ ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಗಳ ಹತ್ಯೆಗಳ ವರ್ಷ ಇದಾಗಿದೆ. 

2020ರಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದರೆ, 2019 ರಲ್ಲಿ 49 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಸಂಘಟಿತ ಅಪರಾಧಿಗಳು, ಭಯೋತ್ಪಾದಕರು ಮತ್ತು ಉಗ್ರವಾದಿ ಹಿಂಸಾಚಾರಗಳಿಗೆ ಪತ್ರಕರ್ತರು ಬಲಿಯಾಗುತ್ತಲೇ ಇದ್ದಾರೆ ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com