ಕಾಶ್ಮೀರ: ಎನ್‌ಕೌಂಟರ್ ಆದ 3 ಉಗ್ರರು ಮುಗ್ಧರು ಎಂದ ಸಂಬಂಧಿಗಳು, ತನಿಖೆ ಆರಂಭಿಸಿದ ಪೊಲೀಸರು
ಭದ್ರತಾ ಪಡೆಗಳು ಲಾವಪೊರಾದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಯುವಕರು ಮುಗ್ಧರಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
Published: 31st December 2020 03:58 PM | Last Updated: 31st December 2020 03:58 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಭದ್ರತಾ ಪಡೆಗಳು ಲಾವಪೊರಾದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಯುವಕರು ಮುಗ್ಧರಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಇನ್ನು ಈ ಮೂವರು ತಮ್ಮ ಉಗ್ರರ ಪಟ್ಟಿಯಲ್ಲಿಲ್ಲ ಎಂದಿರುವ ಪೊಲೀಸರು, ಈ ಕುರಿತು ಸಮಗ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮೃತ ಯುವಕರಾದ ಜುಬೈರ್ ಅಹ್ಮದ್ ಲೋನ್, ಪುಲ್ವಾಮಾ ಮೂಲದ ಐಜಾಜ್ ಮಕ್ಬೂಲ್ ಗಣೈ(ಪದವಿಪೂರ್ವ ವಿದ್ಯಾರ್ಥಿ) ಮತ್ತು ಅಥರ್ ಮುಷ್ತಾಕ್ (11 ನೇ ತರಗತಿ ವಿದ್ಯಾರ್ಥಿ) ನಿರಪರಾಧಿಗಳಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಬಂಧಿಗಳು ಹೇಳಿದ್ದಾರೆ.
ಐಜಾಜ್ ಅವರ ತಂದೆ ಪೊಲೀಸರಾಗಿದ್ದಾರೆ ಮತ್ತು ಜುಬೈರ್ ಅವರ ಇಬ್ಬರು ಸಹೋದರರು ಸಹ ಪೊಲೀಸರಾಗಿದ್ದಾರೆ.
ನನ್ನ ಮೊಮ್ಮಗ ನಿರಪರಾಧಿ ಮತ್ತು ಮುಗ್ಧನಾಗಿದ್ದು, ಆತನನ್ನು ಏಕೆ ಹತ್ಯೆ ಮಾಡಿದರು ಎಂಬುದು ಗೊತ್ತಿಲ್ಲ ಎಂದು ಐಜಾಜ್ ಅವರ ಅಜ್ಜ ಬಶೀರ್ ಅಹ್ಮದ್ ಗನೈ ಅವರು ಹೇಳಿದ್ದಾರೆ.
“ನನ್ನ ಮೊಮ್ಮಗನನ್ನು ಬಂಧಿಸಿ, ಕ್ಯಾಬ್ ನಲ್ಲಿ ಕರೆತಂದು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಅವರು ಪ್ರತಿ ಕಾಶ್ಮೀರಿಗಳನ್ನು ಕೊಲ್ಲಲು ಬಯಸುತ್ತಾರೆ” ಎಂದು ಗನೈ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.