ದೆಹಲಿಯಲ್ಲಿ ಮತ್ತೆರಡು ಶಂಕಿತ ಕರೋನಾ ಪ್ರಕರಣ ದಾಖಲು

ಮಾರಕ ಶಂಕಿಸಲಾಗಿರುವ ಇನ್ನಿಬ್ಬರನ್ನು ನವದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ, ಇದರೊಡನೆ ಈ ವಿಭಾಗದಲ್ಲಿ ಒಟ್ತಾರೆ ಎಂಟು ರೋಗಿಗಳಿದ್ದಾರೆ ಎಂದುದು ಆಸ್ಪತ್ರೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಕೊರೋನಾ ವೈರಸ್ ನೈಂದ ಬಳೌತ್ತಿದ್ದಾರೆಂದು  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಶಂಕಿಸಲಾಗಿರುವ ಇನ್ನಿಬ್ಬರನ್ನು ನವದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ, ಇದರೊಡನೆ ಈ ವಿಭಾಗದಲ್ಲಿ ಒಟ್ತಾರೆ ಎಂಟು ರೋಗಿಗಳಿದ್ದಾರೆ ಎಂದುದು ಆಸ್ಪತ್ರೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಕೊರೋನಾ ವೈರಸ್ ನೈಂದ ಬಳೌತ್ತಿದ್ದಾರೆಂದು 

ಶುಕ್ರವಾರ ಸಂಜೆ, 23 ಮತ್ತು 46 ವರ್ಷ ವಯಸ್ಸಿನ ಇಬ್ಬರು ಪುರುಷರು ಉಸಿರಾಟದ ತೊಂದರೆ ಮತ್ತು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ 23ವರ್ಷದ ಓರ್ವರು ಕಳೆದ ಐದು ವರ್ಷಗಳಿಂದ ವುಹಾನ್‌ನಲ್ಲಿ ತಂಗಿದ್ದರು ಮತ್ತು ಅವರು ಜನವರಿ 24 ರಂದು ಭಾರತಕ್ಕೆ ಮರಳಿದ್ದರು. ಇನ್ನೊಬ್ಬ ವ್ಯಕ್ತಿ ಚಾಂಗ್ಸಾಗೆ ಭೇಟಿ ನೀಡಿ ಜನವರಿ 18 ರಂದು ಭಾರತಕ್ಕೆ ಮರಳಿದ್ದರೆಂದು ಹೇಳಲಾಗಿದೆ.

ಇದಾಗಲೇ ಮಾರಕ ಕೊರೋನಾ ವೈರಸ್‌ನಿಂದ ಪ್ರಭಾವಿತರಾಗಿರಬಹುದೆಂದು ಶಂಕಿಸಲಾಗಿರುವ ಆರು ಜನರು ಪ್ರತ್ಯೇಕ ವಾರ್ಡ್‌ನಲ್ಲಿ ವೈದ್ಯರ ಗಮನದಲ್ಲಿದ್ದಾರೆ. ದೆಹಲಿಯ ನಿವಾಸಿಗಳಾದ ಎಂಟು ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಕೇರಳದಲ್ಲಿ ತನ್ನ ಮೊದಲಕೊರೋನಾ ವೈರಸ್ ಪ್ರಕರಣವನ್ನು ಗುರುವಾರ ವರದಿ ಮಾಡಿದೆ ಮತ್ತು ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿ ರೋಗಿಯನ್ನು ರಾಜ್ಯದ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ.

ಚೀನಾದಲ್ಲಿ 259 ಮಂದಿಯನ್ನು ಬಲಿಪಡೆದಿರುವ ಮಾರಕ ರೋಗದ ಸೋಂಕಿಗೆ 1,791 ಮಂದಿ ಒಳಗಾಗಿದ್ದಾರೆ.ರಸ್ ಹರಡುವಿಕೆಯನ್ನು ಪತ್ತೆ ಹಚ್ಚುವ ಮತ್ತು ತಡೆಗಟ್ಟುವ ಪ್ರಯತ್ನವನ್ನು ಸರ್ಕಾರ ಚುರುಕುಗೊಳಿಸಿದೆ  ಆದರೂ ಈ ಮಾರಕ ರೋಗ ಇದಾಗಲೇ ಜಗತ್ತಿನ ಕನಿಷ್ಠ 17 ದೇಶಗಳಿಗೆ ಹರಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com