ಕರೋನಾವೈರಸ್‌ ಹಿನ್ನೆಲೆ: ಚೀನಾದ ಹುಬೈ ಪ್ರಾಂತ್ಯದಲ್ಲಿದ್ದ 324 ಭಾರತೀಯ ನಾಗರಿಕರನ್ನು ಕರೆ ತಂದ ವಿಮಾನ

ಮಹಾಮಾರಿ ಕರೋನವೈರಸ್‌ ಪೀಡಿತವಾಗಿರುವ ಚೀನಾದ ಹುಬೈ ಪ್ರಾಂತ್ಯದಿಂದ 324 ಭಾರತೀಯ ನಾಗರಿಕರನ್ನು ಏರ್ ಇಂಡಿಯಾ ವಿಮಾನ ಇಂದು ಭಾರತಕ್ಕೆ ಕರೆ ತಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾಮಾರಿ ಕರೋನವೈರಸ್‌ ಪೀಡಿತವಾಗಿರುವ ಚೀನಾದ ಹುಬೈ ಪ್ರಾಂತ್ಯದಿಂದ 324 ಭಾರತೀಯ ನಾಗರಿಕರನ್ನು ಏರ್ ಇಂಡಿಯಾ ವಿಮಾನ ಇಂದು ಭಾರತಕ್ಕೆ ಕರೆ ತಂದಿದೆ.

ಇಂದು ಬೆಳಿಗ್ಗೆ 7.30 ರ ಸುಮಾರಿಗೆ ದೆಹಲಿಗೆ ಈ ವಿಮಾನ ಬಂದಿಳಿದಿದ್ದು, ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ. ಭಾರತೀಯ ನಾಗರಿಕರನ್ನು ವುಹಾನ್‌ನಿಂದ ಸ್ಥಳಾಂತರಿಸಲು ಕಳುಹಿಸಲಾದ ಜಂಬೊ 747 ರಲ್ಲಿ ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗಳ ತಂಡ ಇದ್ದರು. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಮತ್ತು ಐಟಿಬಿಪಿ ನಿರ್ವಹಿಸುತ್ತಿರುವ ಚಾವ್ಲಾ ಕ್ಯಾಂಪ್‌ನಿಂದ ನಿರ್ವಹಿಸಲ್ಪಡುವ ಮನೇಸರ್‌ನಲ್ಲಿ ಸ್ಥಾಪಿಸಲಾದ ಎರಡು ಸಂಪರ್ಕತಡೆ ಕೇಂದ್ರಗಳಲ್ಲಿ ಈ ಪ್ರಯಾಣಿಕರನ್ನು 14 ದಿನಗಳ ಕಾಲ ಇಡಲಾಗುತ್ತದೆ ಮತ್ತು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ. 

ಚೀನಾ ಸರ್ಕಾರಕ್ಕೆ ಎಸ್‌.ಜೈಶಂಕರ್ ಕೃತಜ್ಞತೆ
ಕರೋನಾವೈರಸ್ ಬಾಧಿತ ಚೀನಾದ ವುಹಾನ್ ನಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ದೇಶಕ್ಕೆ ಕರೆತರಲು ನೀಡಿದ ಸಹಕಾರಕ್ಕೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚೀನಾ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಂದು ಚೀನಾದ ಸ್ಟೇಟ್‌ ಕೌನ್ಸಿಲರ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ  ಮಾತುಕತೆ ನಡೆಸಿದ್ದೇನೆ. ಚೀನಾ, ಕರೋನವೈರಸ್ ಸವಾಲನ್ನು ನಿಭಾಯಿಸುವವರೆಗೂ, ಇಬ್ಬರೂ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದೇವೆ ಎಂದು ಟ್ವೀಟ್ ನಲ್ಲಿ ಜೈಶಂಕರ್ ಹೇಳಿದ್ದಾರೆ.

ಮಹಾಮಾರಿ ಕರೋನವೈರಸ್‌ ಪೀಡಿತವಾಗಿರುವ ಚೀನಾದ ಹುಬೈ ಪ್ರಾಂತ್ಯದಿಂದ 324 ಭಾರತೀಯ ನಾಗರಿಕರನ್ನು ಏರ್ ಇಂಡಿಯಾ ವಿಮಾನ ಇಂದು ಭಾರತಕ್ಕೆ ಕರೆ ತಂದಿದೆ. ಇಂದು ಬೆಳಿಗ್ಗೆ 7.30 ರ ಸುಮಾರಿಗೆ ದೆಹಲಿಗೆ ಈ ವಿಮಾನ ಬಂದಿಳಿದಿದ್ದು,  ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ. ಭಾರತೀಯ ನಾಗರಿಕರನ್ನು ವುಹಾನ್‌ನಿಂದ ಸ್ಥಳಾಂತರಿಸಲು ಕಳುಹಿಸಲಾದ ಜಂಬೊ 747 ರಲ್ಲಿ ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗಳ ತಂಡ ಇದ್ದರು. ಈ ಹಿನ್ನೆಲೆಯಲ್ಲಿ ಜೈಶಂಕರ್ ಚೀನಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com