ಕೋಲ್ಕತ್ತಾ: ಕೊಳೆತ ಪತ್ನಿಯ ಶವದ ಜೊತೆ ಮೂರು ದಿನ ಕಳೆದ ಪತಿ

ಪತ್ನಿಯ ಕೊಳೆತ ಶವದ ಜೊತೆಗೆ ಪತಿಯು ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವರದಿಯಾಗಿದೆ. 

Published: 01st February 2020 12:49 PM  |   Last Updated: 01st February 2020 12:49 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : IANS

ಕೋಲ್ಕತ್ತಾ: ಪತ್ನಿಯ ಕೊಳೆತ ಶವದ ಜೊತೆಗೆ ಪತಿಯು ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವರದಿಯಾಗಿದೆ. 

ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಡಿಯಾ ಜಿಲ್ಲೆಯ ಚಕ್ಢ್ ನಲ್ಲಿ ಈ ಘಟನೆ ನಡೆದಿದೆ. 

ಭಾರತಿ ಚಂದ ಎಂಬ ಮಧ್ಯ ವಯಸ್ಕ ಮಹಿಳೆ ಸಾವನ್ನಪ್ಪಿದವರು. ಆಕೆ ಲಿವರ್ ಸಂಬಂಧಿತ ಆರೊಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪತ್ತೆಯಾದ ಶವ ಕೊಳೆತು ಹೋಗಿದ್ದು, ಮಹಿಳೆ ಮೃತಪಟ್ಟು ಹಲವು ದಿನಗಳೇ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ ಭಾರತಿ ಅವರನ್ನು ಕಳೆದ ಸೋಮವಾರ ಕಡೆಯದಾಗಿ ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. 

ಕೆಲ ದಿನಗಳ ಕಾಲ ಮನೆಯಿಂದ ಯಾರೂ ಹೊರಬರದ ಕಾರಣ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಇನ್ನು ಪತಿಯ ಮಾನಸಿಕ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp