ಕಣಿವೆ ರಾಜ್ಯದಲ್ಲಿ ಎನ್ ಕೌಂಟರ್: ಜೈಶ್-ಇ- ಮೊಹಮದ್ ಸಂಘಟನೆಯ 3 ಉಗ್ರರು ಫಿನಿಶ್

ಜನವರಿ 31 ರಂದು ನಡೆದ ಗುಂಡಿನ ದಾಳಿಯಲ್ಲಿ ಜೈಶ್-ಇ- ಮೊಹಮದ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆಯು ಹೊಡೆದುರುಳಿಸಿದೆ.  ಇವರು ಇತ್ತೀಚೆಗೆ ಪಾಕಿಸ್ತಾನ ಗಡಿಯಿಂದ ನುಸುಳಿ ಬಂದಿದ್ದರು ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ .
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜನವರಿ 31 ರಂದು ನಡೆದ ಗುಂಡಿನ ದಾಳಿಯಲ್ಲಿ ಜೈಶ್-ಇ- ಮೊಹಮದ್ ಉಗ್ರ ಸಂಟನೆಯ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆಯು ಹೊಡೆದುರುಳಿಸಿದೆ.  ಇವರು ಇತ್ತೀಚೆಗೆ ಪಾಕಿಸ್ತಾನ ಗಡಿಯಿಂದ ನುಸುಳಿ ಬಂದಿದ್ದರು ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ .

ಬೆಳ್ಳಂಬೆಳಗ್ಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಟ್ರಕ್ ನಲ್ಲಿ ಉಗ್ರರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಟ್ರಕ್ ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಭದ್ರತಾ ಸಿಬ್ಬಂದಿಗೆ ಗಾಯವಾಗಿತ್ತು.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲೇ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಭಾರತೀಯ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಯಿತು.

ಟ್ರಕ್ ಚಾಲಕ ಸಲೀಂ ದಾರ್ ಗೂ ಜೈಶ್ -ಇ ಮೊಹಮ್ಮದ್ ಸಂಘಟನೆಗೂ ಮೊದಲಿನಿಂದಲೂ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪುಲ್ವಾಮಾ ದಾಳಿಯ ಉಗ್ರ ಆದಿಲ್ ದಾರ್ ಮತ್ತು ಸಲೀಂ ದಾರ್ ಇಬ್ಬರೂ ಸಂಬಂಧಿಕರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಭದ್ರತಾ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

ಇನ್ನು, ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ ಬೆನ್ನಲ್ಲೇ ಐದು ಎಕೆ-47, ಅಮೆರಿಕಾದಲ್ಲಿ ಸಿದ್ಧಗೊಂಡ ರೈಫಲ್ ಮತ್ತು ಐದು ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com