ಲಕ್ನೊ: ಅಖಿಲ ಭಾರತೀಯ ಹಿಂದೂ ಮಹಾಸಭಾ ನಾಯಕನ ಹತ್ಯೆ 

ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಛತ್ತರ್ ಮಂಜಿಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರನ್ನು ರಂಜಿತ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಅವರು ರಂಜಿತ್ ಶ್ರೀವಾಸ್ತವ್ ಅಲ್ಲ ರಂಜಿತ್ ಯಾದವ್ ಎನ್ನುತ್ತಿದ್ದಾರೆ.

Published: 02nd February 2020 11:20 AM  |   Last Updated: 02nd February 2020 11:20 AM   |  A+A-


Akhil Bhartiya Hindu Mahasabha leader Ranjit Bachchan

ಅಖಿಲ ಭಾರತ ಹಿಂದೂ ಮಹಾಸಭಾ ನಾಯಕ ರಂಜಿತ್ ಶ್ರೀವಾಸ್ತವ

Posted By : Sumana Upadhyaya
Source : PTI

ಲಕ್ನೊ: ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಛತ್ತರ್ ಮಂಜಿಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರನ್ನು ರಂಜಿತ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಅವರು ರಂಜಿತ್ ಶ್ರೀವಾಸ್ತವ್ ಅಲ್ಲ ರಂಜಿತ್ ಯಾದವ್ ಎನ್ನುತ್ತಿದ್ದಾರೆ.


ಕಳೆದ ಅಕ್ಟೋಬರ್ ನಲ್ಲಿ ಮತ್ತೊಬ್ಬ ಬಲಪಂಥೀಯ ನಾಯಕ ಕಮಲೇಶ್ ತಿವಾರಿ ಅವರನ್ನು ಕೂಡ ಲಕ್ನೊದ ಅವರ ಕಚೇರಿಯಲ್ಲಿ ಹತ್ಯೆ ಮಾಡಲಾಗಿತ್ತು.


ಇಂದು ಬೆಳಗ್ಗೆ ಅವರು ವಾಯುವಿಹಾರ ಹೊರಟಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ರಂಜಿತ್ ಶ್ರೀವಾಸ್ತವ ಅವರ ತಲೆಗೆ ಹಲವು ಬುಲೆಟ್ ಗಾಯಗಳಾಗಿದ್ದು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರು.
ಈ ಸಂದರ್ಭದಲ್ಲಿ ಶ್ರೀವಾಸ್ತವ್ ಅವರ ಜೊತೆಗಿದ್ದ ಅವರ ಸೋದರನಿಗೂ ಗಾಯಗಳಾಗಿದ್ದು ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ವಿ.ವಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಒಸಿಆರ್ ಕಟ್ಟಡದಲ್ಲಿ ವಾಸಿಸುತ್ತಿದ್ದ ರಂಜಿತ್ ಶ್ರೀವಾಸ್ತವ ಅವರು ಗೋರಖ್ ಪುರಕ್ಕೆ ಸೇರಿದವರಾಗಿದ್ದಾರೆ.ಕಳೆದ ನಾಲ್ಕು ತಿಂಗಳಲ್ಲಿ ಹತ್ಯೆಯಾದ ರಾಜ್ಯದ ಎರಡನೇ ಹಿಂದೂ ನಾಯಕರು ರಂಜಿತ್ ಆಗಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp