ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಳಂಬ: ಇಂದು ದೆಹಲಿ ಹೈಕೋರ್ಟ್ ನಿಂದ ವಿಶೇಷ ವಿಚಾರಣೆ 

ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳ ಗಲ್ಲುಶಿಕ್ಷೆ ಮುಂದೂಡಿಕೆಯಾಗುತ್ತಿರುವುದರ ಮಧ್ಯೆ ದೆಹಲಿ ಹೈಕೋರ್ಟ್ ಭಾನುವಾರ ವಿಶೇಷ ವಿಚಾರಣೆ ನಡೆಸಿದೆ.
ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಳಂಬ: ಇಂದು ದೆಹಲಿ ಹೈಕೋರ್ಟ್ ನಿಂದ ವಿಶೇಷ ವಿಚಾರಣೆ 

ನವದೆಹಲಿ:ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳ ಗಲ್ಲುಶಿಕ್ಷೆ ಮುಂದೂಡಿಕೆಯಾಗುತ್ತಿರುವುದರ ಮಧ್ಯೆ ದೆಹಲಿ ಹೈಕೋರ್ಟ್ ಭಾನುವಾರ ವಿಶೇಷ ವಿಚಾರಣೆ ನಡೆಸಿದೆ.


ಗಲ್ಲುಶಿಕ್ಷೆಯ ತಡೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿರುವುದಕ್ಕೆ ದೆಹಲಿ ಹೈಕೋರ್ಟ್ ತಿಹಾರ್ ಜೈಲು ಅಧಿಕಾರಿಗಳು ಮತ್ತು ನಿರ್ಭಯಾ ಅಪರಾಧಿಗಳಿಗೆ ನೊಟೀಸ್ ಜಾರಿ ಮಾಡಿ ಅವರ ಪ್ರತಿಕ್ರಿಯೆ ಕೇಳಿದೆ.


ನಿನ್ನೆ ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿತು. ನಿರ್ಭಯಾ ಅಪರಾಧಿಗಳ ಗಲ್ಲುಶಿಕ್ಷೆ ತಡೆ ನೀಡಿ ತ್ವರಿತ ನ್ಯಾಯಾಲಯ ವಿಧಿಸಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನೊಟೀಸ್ ಜಾರಿ ಮಾಡಿತ್ತು.


ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲುಶಿಕ್ಷೆಯ ದಿನಾಂಕ ಸಮೀಪಿಸುತ್ತಿರುವ ದಿನಗಳಲ್ಲಿ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ, ಕ್ಯುರೇಟಿವ್ ಅರ್ಜಿ, ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುವ ಮೂಲಕ ಕಾನೂನಿನ ಜೊತೆಗೇ ಆಟವಾಡುತ್ತಾ ಗಲ್ಲುಶಿಕ್ಷೆಗೆ ಅನಗತ್ಯವಾಗಿ ವಿಳಂಬ ಹೇರುತ್ತಿದ್ದಾರೆ. ನ್ಯಾಯಾಂಗ ಪ್ರಕ್ರಿಯೆ ಮೇಲೆ ಸವಾರಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲಿನ ಅಧಿಕಾರಿಗಳು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com