ನಿರ್ಭಯಾ ಅಪರಾಧಿಗಳು ಕಾನೂನಿನೊಂದಿಗೆ ಆಟವಾಡುತ್ತಿದ್ದಾರೆ: ಕೇಂದ್ರ ಆರೋಪ

ನಿರ್ಭಯಾ ಅಪರಾಧಿಗಳು ನ್ಯಾಯಾಂಗ ಪ್ರಕ್ರಿಯೆಯನ್ನು ಒಂದು 'ಮಜದ ಪಯಣ'ದಂತೆ ಪರಿಗಣಿಸಿದ್ದು, ಗಲ್ಲು ಶಿಕ್ಷೆಯ ಜಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿಸಿತು.

Published: 02nd February 2020 08:56 PM  |   Last Updated: 02nd February 2020 08:56 PM   |  A+A-


Nirbhaya Convicts

ನಿರ್ಭಯಾ ಅಪರಾಧಿಗಳು

Posted By : Vishwanath S
Source : UNI

ನವದೆಹಲಿ: ನಿರ್ಭಯಾ ಅಪರಾಧಿಗಳು ನ್ಯಾಯಾಂಗ ಪ್ರಕ್ರಿಯೆಯನ್ನು ಒಂದು 'ಮಜದ ಪಯಣ'ದಂತೆ ಪರಿಗಣಿಸಿದ್ದು, ಗಲ್ಲು ಶಿಕ್ಷೆಯ ಜಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿಸಿತು. 

ಗಲ್ಲುಶಿಕ್ಷೆ ಜಾರಿಗೆ  ದೆಹಲಿ ಪಟಿಯಾಲ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಪರಾಧಿಗಳನ್ನು ಪ್ರತ್ಯೇಕವಾಗಿ ನೇಣಿಗೇರಿಸಬಹುದು. ಕ್ಷಮಾದಾನ ಅರ್ಜಿ ವಿಚಾರಣೆಗೆ ಬಾಕಿಯಿದ್ದಲ್ಲಿ ಮಾತ್ರ ಅವರನ್ನು ಗಲ್ಲಿಗೇರಿಸುವ ಆದೇಶಕ್ಕೆ ತಡೆ ಹಿಡಿಯಬಹುದು. ಆದರೆ, ಈ ಪ್ರಕರಣದಲ್ಲಿ ಘಟನೆ ನಡೆದು ಏಳು ವರ್ಷಗಳು ಕಳೆದಿದ್ದರೂ ಇನ್ನೂ ಅಪರಾಧಿಗಳು ಕಾನೂನಿನೊಂದಿಗೆ ಆಟವಾಡುತ್ತಿದ್ದಾರೆ ಎಂದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp