ಉತ್ತರ ಪ್ರದೇಶ: ಕೆಎಲ್ಎಫ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದವನ ಬಂಧನ: ಎಟಿಎಸ್ ಕಾರ್ಯಾಚರಣೆ 

ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ತಂಡ ಕಾರ್ಯಾಚರಣೆ ನಡೆಸಿದ್ದು ಖಾಲಿಸ್ತಾನ ವಿಮೋಚನಾ ಪಡೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ. 
ಉತ್ತರ ಪ್ರದೇಶ: ಕೆಎಲ್ಎಫ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದವನ ಬಂಧನ: ಎಟಿಎಸ್ ಕಾರ್ಯಾಚರಣೆ
ಉತ್ತರ ಪ್ರದೇಶ: ಕೆಎಲ್ಎಫ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದವನ ಬಂಧನ: ಎಟಿಎಸ್ ಕಾರ್ಯಾಚರಣೆ

ಲಖನೌ: ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ತಂಡ ಕಾರ್ಯಾಚರಣೆ ನಡೆಸಿದ್ದು ಖಾಲಿಸ್ತಾನ ವಿಮೋಚನಾ ಪಡೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ. 

ಹರಿದ್ವಾರದಲ್ಲಿ ಆಶಿಶ್ ಬಂಧನಕ್ಕೊಳಗಾಗಿದ್ದು, ಶಸ್ತ್ರಾಸ್ತ್ರ ಪೂರೈಕೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ವ್ಯಕ್ತಿಯ ಬಗ್ಗೆ ಪಂಜಾಬ್ ಪೊಲೀಸರು ಉತ್ತರ ಪ್ರದೇಶದ ಪೊಲೀಸರಿಗೆ ಕಳೆದ ವಾರ ಮಾಹಿತಿ ರವಾನಿಸಿದ್ದರು.

ಆಶೀಶ್ ಸಿಂಗ್ ವಿರುದ್ಧ ಹತ್ಯೆ ಯತ್ನ, ಮಾರಣಾಂತಿಕ ಶಸ್ತ್ರಾಸ್ತ್ರಗಳ ಮೂಲಕ ಗಲಭೆ ಸೃಷ್ಟಿ, ಕ್ರಿಮಿನಲ್ ಸಂಚು, 2018 ರಲ್ಲಿ ಅಪರಾಧಿಯೊಬ್ಬನಿಗೆ ಆಶ್ರಯ ನೀಡಿದ್ದ ಆರೋಪವೂ ಇದೆ.

ಬಂಧಿತ ಆಶೀಸ್ ಸಿಂಗ್ ಖಾಲಿಸ್ತಾನದ ಮುಖ್ಯಸ್ಥ ಹರ್ಮೀತ್ ಸಿಂಗ್ ನ ನಿಕಟವರ್ತಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಜ.27 ರಂದು ಖಾಲಿಸ್ತಾನಿ ಮುಖ್ಯಸ್ಥನ ಹತ್ಯೆಯ ನಂತರ ಪಂಜಾಬ್ ಪೊಲೀಸರು ಸುಖ್ ಪ್ರೀತ್ ಸಿಂಗ್ ಎಂಬಾತನನ್ನು ಪತ್ತೆ ಮಾಡಿದ್ದರು. ಈತ ನೀಡಿದ ಮಾಹಿತಿಯ ಆಧಾರದಲ್ಲಿ ಆಶೀಶ್ ಸಿಂಗ್ ನ್ನು ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com