ಕೊರೋನಾ ವೈರಸ್: ಚೀನಾದಿಂದ ತವರಿಗೆ ಮರಳಿದ ಖುಷಿಗೆ ಕುಣಿದು ಕುಪ್ಪಳಿಸಿದ ಭಾರತೀಯ ವಿದ್ಯಾರ್ಥಿಗಳು

ಕೊರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಿಂದ ಮರಳಿದ ಖುಷಿಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡ ಭಾರತೀಯ ವಿದ್ಯಾರ್ಥಿಗಳು ನೃತ್ಯ ಮಾಡಿ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 
ಕೊರೋನಾ ವೈರಸ್: ಚೀನದಿಂದ ತವರಿಗೆ ಮರಳಿದ ಖುಷಿದೆ ಕುಣಿದು ಕುಪ್ಪಳಿಸಿದ ಭಾರತೀಯ ವಿದ್ಯಾರ್ಥಿಗಳು
ಕೊರೋನಾ ವೈರಸ್: ಚೀನದಿಂದ ತವರಿಗೆ ಮರಳಿದ ಖುಷಿದೆ ಕುಣಿದು ಕುಪ್ಪಳಿಸಿದ ಭಾರತೀಯ ವಿದ್ಯಾರ್ಥಿಗಳು

ನವದೆಹಲಿ: ಕೊರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಿಂದ ಮರಳಿದ ಖುಷಿಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡ ಭಾರತೀಯ ವಿದ್ಯಾರ್ಥಿಗಳು ನೃತ್ಯ ಮಾಡಿ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 

ಏರ್ ಇಂಡಿಯಾ ವಿಮಾನದ ಮೂಲ, ವುಹಾನ್ ನಿಂದ 300 ವದ್ಯಾರ್ಥಿಗಳನ್ನು ಕರೆತರಲಾಗಿದ್ದು, ಕೆಲವು ವಿದ್ಯಾರ್ಥಿಗಳು ತಾವಿದ್ದ ಕೋಣೆಯಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮ ಪಟ್ಟಿದ್ದಾರೆ. 

ಚೀನಾದಿಂದ ಭಾರತಕ್ಕೆ ಮರಳಿ ಕರೆತಂದ ಬಳಿಕ ವಿದ್ಯಾರ್ಥಿಗಳು ಸಂತೋಷಗೊಂಡಿದ್ದಾರೆ. ಮಾಸ್ಕ್ ಧರಿಸಿದ್ದರೂ, ಭಾರತಕ್ಕೆ ಬಂದ ಸಂತೋಷಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಸಂತೋಷವನ್ನು ವಿಡಿಯೋದಲ್ಲಿ ನೋಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳ ಮೂಲಕ ಈ ವರೆಗೂ ಚೀನಾದಿಂದ 647 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಮೊದಲನೇ ಬ್ಯಾಚ್ ನಲ್ಲಿ 324 ಭಾರತೀಯರು ಹಾಗೂ ಎರಡನೇ ಬ್ಯಾಚ್ ನಲ್ಲಿ 323 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com