ಮೋದಿ ಸರ್ಕಾರ ಎಲ್ಲರಿಗೂ ಡಿಎನ್‌ಎ ಪರೀಕ್ಷೆ ಮಾಡಿಸಲಿ: ಸಿಎಎ ಕುರಿತು ಬಿಜೆಪಿಯನ್ನು ಕುಟುಕಿದ ಮಹಾರಾಷ್ಟ್ರ ಸಚಿವ

ಎನ್‌ಆರ್‌ಸಿ-ಸಿಎಎ ಕಾನೂನು ಜಾರಿಯಾಗಿದ್ದು ಈ ಕಾಯ್ದೆ ಮೂಲಕ ಭಾರತೀಯ ಮೂಲನಿವಾಸಿಗಳನ್ನು ಗುರುತಿಸುವುದು ಅತ್ಯಂತ ಮುಖ್ಯ ಎಂದಾದರೆ ಎಲ್ಲಾ ಪ್ರಜೆಗಳ ಮೇಲೆ ಡಿಎನ್‌ಎ ಪರೀಕ್ಷೆ ನಡೆಸಿ ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಹೇಳಿದ್ದಾರೆ. ಅವ್ಹಾದ್ ಅವರು ತಮ್ಮ ಈ ಹೇಳಿಕೆ ಮೂಲಕ ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಮೋದಿ ಸರ್ಕಾರ ಎಲ್ಲರಿಗೂ ಡಿಎನ್‌ಎ ಪರೀಕ್ಷೆ ಮಾಡಿಸಲಿ: ಸಿಎಎ ಕುರಿತು ಬಿಜೆಪಿಯನ್ನು ಕುಟುಕಿದ ಮಹಾರಾಷ್ಟ್ರ ಸಚಿವ
ಮೋದಿ ಸರ್ಕಾರ ಎಲ್ಲರಿಗೂ ಡಿಎನ್‌ಎ ಪರೀಕ್ಷೆ ಮಾಡಿಸಲಿ: ಸಿಎಎ ಕುರಿತು ಬಿಜೆಪಿಯನ್ನು ಕುಟುಕಿದ ಮಹಾರಾಷ್ಟ್ರ ಸಚಿವ

ಮುಂಬೈ: ಎನ್‌ಆರ್‌ಸಿ-ಸಿಎಎ ಕಾನೂನು ಜಾರಿಯಾಗಿದ್ದು ಈ ಕಾಯ್ದೆ ಮೂಲಕ ಭಾರತೀಯ ಮೂಲನಿವಾಸಿಗಳನ್ನು ಗುರುತಿಸುವುದು ಅತ್ಯಂತ ಮುಖ್ಯ ಎಂದಾದರೆ ಎಲ್ಲಾ ಪ್ರಜೆಗಳ ಮೇಲೆ ಡಿಎನ್‌ಎ ಪರೀಕ್ಷೆ ನಡೆಸಿ ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಹೇಳಿದ್ದಾರೆ. ಅವ್ಹಾದ್ ಅವರು ತಮ್ಮ ಈ ಹೇಳಿಕೆ ಮೂಲಕ ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

ತಿದ್ದುಪಡಿ ಮಾಡಿದ ಪೌರತ್ವ ಕಾನೂನಿನ ಬಗ್ಗೆ ಟೀಕಿಸಿದ ಎನ್‌ಸಿಪಿ ನಾಯಕ ಅವ್ಹಾದ್  ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಮಹಾರಾಷ್ಟ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದಾರೆ.

“ಭಾರತದಲ್ಲಿ, ಬುಡಕಟ್ಟು ಜನಾಂಗದವರು ಮತ್ತು ಜಿಪ್ಸಿಗಳಂತಹ ಹಲವಾರು ಸಮುದಾಯಗಳಿವೆ, ಅವರು ಸದಾಕಾಲ ಜೀವನೋಪಾಯದ ಹುಡುಕಾಟದಲ್ಲಿ ತೊಡಗಿರುವರು.ಅಂತಹ ಸಂದರ್ಭದಲ್ಲಿ, ಅವರು ಆಧಾರ್, ಪ್ಯಾನ್ ಅಥವಾ ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಹೊಂದಿಲ್ಲ ಎಂದಾದರೆ  ತಮ್ಮ ಪೌರತ್ವವನ್ನು ಹೇಗೆ ಸಾಬೀತುಪಡಿಸುತ್ತಾರೆ? ”ಎಂದು ಅವ್ಹಾದ್ ಪ್ರಶಿಸಿದ್ದಾರೆ.

“ನಾವು ಸರ್ಕಾರದ ದಬ್ಬಾಳಿಕೆ ಮತ್ತು ಸರ್ವಾಧಿಕಾರವನ್ನು ವಿರೋಧಿಸುತ್ತೇವೆ. ಈ ಕಾಯ್ದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಜನರ ಆಕ್ರೋಶ  ದಿನದಿಂದ ದಿನಕ್ಕೆ ಬೆಳೆಯುತ್ತದೆ, ”ಎಂದು  ಅವ್ಹಾದ್  ಹೇಳಿದರು, ನಾಗರಿಕರ ಮೂಲದ ಬಗೆಗೆ ಸರ್ಕಾರ ನಿಜಕ್ಕೂ ಗಂಬೀರವಾಗಿದ್ದರೆ  ಎಲ್ಲ ಭಾರತೀಯರ ಡಿಎನ್‌ಎ ಪರೀಕ್ಷೆಯನ್ನು ಪ್ರಾರಂಭಿಸಬೇಕು."ಯುರೇಷಿಯಾದಿಂದ ಅನೇಕ ಮಂದಿ ವಲಸೆ ಬಂದು ಭಾರತದಲ್ಲಿ ನೆಲೆಸಿದ್ದರು.  ಭಾರತದಲ್ಲಿ ರಷ್ಯಾ ಮತ್ತು ಮದ್ಯ ಏಷ್ಯಾದಿಂದ ಆಗಮಿಸಿದ ಜನರಿದ್ದಾರೆ. ಅವರನ್ನು ಆರ್ಯನ್ನರು ಎನ್ನಲಾಗುತ್ತದೆ. ಆದ್ದರಿಂದ ಈ ಜನರನ್ನು ಅವರ ಸ್ಕ್ರೀನಿಂಗ್ ಮತ್ತು ಡಿಎನ್‌ಎ ಪರೀಕ್ಷೆಯ ನಂತರ ಯುರೇಷಿಯಾಕ್ಕೆ ಕಳುಹಿಸಬೇಕು, ”ಎಂದು ಸಚಿವರು ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

ಸಚಿವರು  ತನ್ನ ಸಿಎಎ ವಿರೋಧಿ ನಿಲುವನ್ನು ಬಹಿರಂಗಪಡಿಸಿದ್ದು ಇದೇನೂ ಮೊದಲಲ್ಲ. ಈ ಹಿಂದೆ  ಥಾಣೆಯಲ್ಲಿ  ನಡೆದ ರ್ಯಾಲಿಯಲ್ಲಿ ಅವರು ದೆಹಲಿಯಲ್ಲಿ ಅಧಿಕಾರದಲ್ಲಿ ಕುಳಿತ ಜನರ ಪೂರ್ವಜರು ಬ್ರಿಟಿಷರನ್ನು ಸಮಾಧಾನಪಡಿಸುತ್ತಿದ್ದರು ಮತ್ತು ತಮ್ಮ ಪೂರ್ವಜರು ಇನ್‌ಕ್ವಿಲಾಬ್ ಜಿಂದಾಬಾದ್‌ನ ಘೋಷಣೆಗಳನ್ನು ಕೂಗುತ್ತಿದ್ದರೆಂದು ಹೇಳಿಕೆ ನೀಡಿದ್ದರು.

ಏತನ್ಮಧ್ಯೆ, ಬಿಜೆಪಿ ಮಾಜಿ ಸಂಸದ ಕೀರ್ತಿ ಸೋಮಯ್ಯ  ಮಾತನಾಡಿ, ಮಹಾರಾಷ್ಟ್ರ ಸಚಿವರು ಭಾರತದ ಪ್ರತಿಯೊಬ್ಬ ನಾಗರಿಕರ ಡಿಎನ್ಎ ಪರೀಕ್ಷೆಯನ್ನು ನಡೆಸುವಂತೆ ಕೇಂದ್ರವನ್ನು ಕೇಳುವ ಮೂಲಕ ನೈಜ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಾರೆ ಎಂದು ಟೀಕಿಸಿದ್ದಾರೆ. “ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಗೊಂದಲವಿದೆ. ಒಬ್ಬರು ಕಾಯ್ದೆಗೆ ಬೆಂಬಲಿಸುತ್ತಿದ್ದಾರೆ, ಇನ್ನೊಬ್ಬರು ವಿರೋಧಿಸುತ್ತಿದ್ದಾರೆ ... ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಸಿಎಎ ಮತ್ತು ಎನ್‌ಆರ್‌ಸಿಗಿಂತ ಮೊದಲು ತಮ್ಮ ಸ್ಥಾನ ಹಂಚಿಕೆಯನ್ನು ಸರಿಪಡಿಸಿಕೊಳ್ಲಬೇಕಿದೆ. ನಂತರ, ನಾವು ಡಿಎನ್‌ಎ ಪರೀಕ್ಷೆಯನ್ನು ನಡೆಸುವ ಬಗ್ಗೆ ಮತ್ತು ಯುರೇಷಿಯಾದ ಜನರ ಬಗ್ಗೆ ಪ್ರತಿಕ್ರಿಯಿಸಬಹುದು" ಸೋಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com