ವಿಡಿಯೋ: ನಿಯಮ ಉಲ್ಲಂಘಿಸಿದ ಕಾರು ನಿಲ್ಲಿಸಿದ ಪೊಲೀಸ್ ಮೇಲೆ ಕಾರು ಹರಿಸಲು ಮುಂದಾದ ಡ್ರೈವರ್!

ರಸ್ತೆ ನಿಯಮ ಉಲ್ಲಂಘಿಸಿದ ಕಾರನ್ನು ನಿಲ್ಲಿಸಿದ್ದ ಟ್ರಾಫಿಕ್ ಪೊಲೀಸರ ಮೇಲೆಯೇ ಚಾಲಕನೋರ್ವ ಕಾರು ಹರಿಸಲು ಮುಂದಾದ ಘಟನೆ ದೆಹಲಿಯಲ್ಲಿ ನಡೆದಿದೆ.

Published: 03rd February 2020 01:44 PM  |   Last Updated: 03rd February 2020 01:44 PM   |  A+A-


Man drags Delhi traffic cop on car's bonnet, video goes viral

ವೈರಲ್ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ರಸ್ತೆ ನಿಯಮ ಉಲ್ಲಂಘಿಸಿದ ಕಾರನ್ನು ನಿಲ್ಲಿಸಿದ್ದ ಟ್ರಾಫಿಕ್ ಪೊಲೀಸರ ಮೇಲೆಯೇ ಚಾಲಕನೋರ್ವ ಕಾರು ಹರಿಸಲು ಮುಂದಾದ ಘಟನೆ ದೆಹಲಿಯಲ್ಲಿ ನಡೆದಿದೆ.

ಕಳೆದ ನವೆಂಬರ್ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಸುನಿಲ್ ಎಂಬ ಟ್ರಾಫಿಕ್ ಪೊಲೀಸ್ ದೆಹಲಿ ಹೊರವಲಯದ ನಗ್ಲೋಯ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ತಪ್ಪು ದಾರಿಯಲ್ಲಿ ಕಾರೊಂದು ಆಗಮಿಸಿದ್ದು, ಕೂಡಲೇ ಇದನ್ನು ಗಮನಿಸಿದ ಪೇದೆ ಸುನಿಲ್ ಕಾರನ್ನು ನಿಲ್ಲಿಸಿದ್ದಾರೆ. ಅಲ್ಲದೆ ಕಾರಿನಿಂದ ಇಳಿದು ದಾಖಲೆ ತೋರಿಸುವಂತೆ ಚಾಲಕನನ್ನು ಕೇಳಿದ್ದಾರೆ.

ಇದಕ್ಕೆ ಸೊಪ್ಪು ಹಾಕದ ಚಾಲಕ ಕಾರಿನಲ್ಲಿಯೇ ಕುಳಿತು ಕಾರು ಚಾಲನೆಗೆ ಮುಂದಾದಾಗ ಪೇದೆ ಸುನಿಲ್ ಕೂಡಲೇ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ. ಸುಮಾರು 2 ಕಿ.ಮೀ ದೂರದವರೆಗೇ ಪೇದೆ ಸುನಿಲ್ ನನ್ನು ಹೊತ್ತೊಯ್ದ ಚಾಲಕ  ಬಳಿಕ ಪೇದೆಯನ್ನು ಕೆಳಗಿಳಿಸಿ ಪರಾರಿಯಾಗಿದ್ದಾನೆ. ಇವಿಷ್ಟೂ ಘಟನೆಯನ್ನು ಕಾರಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಅಗಿದೆ.

ಬರೊಬ್ಬರಿ 2 ತಿಂಗಳ ನಂತರ ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp