ಶಾಹೀನ್ ಬಾಗ್: ಚಳಿಯಿಂದ ಹಸುಗೂಸು ಮೃತಪಟ್ಟರೂ ಮತ್ತೆ ಪ್ರತಿಭಟನೆಗೆ ಮರಳಿದ ತಾಯಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೊರೆಯುವ ಚಳಿಯ ನಡುವೆಯೂ ತಾಯಿಯೊಂದಿಗೆ  ತಲೆಗೆ ತ್ರಿವಣ ಧ್ವಜ ಹೊದ್ದು ಕುಳಿತುಕೊಳ್ಳುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೊಹಮ್ಮದ್ ಜಹಾನ್ ಮೃತಪಟ್ಟಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೊರೆಯುವ ಚಳಿಯ ನಡುವೆಯೂ ತಾಯಿಯೊಂದಿಗೆ  ತಲೆಗೆ ತ್ರಿವಣ ಧ್ವಜ ಹೊದ್ದು ಕುಳಿತುಕೊಳ್ಳುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೊಹಮ್ಮದ್ ಜಹಾನ್ ಮೃತಪಟ್ಟಿದೆ

ತೀವ್ರ ಚಳಿ ಹಾಗೂ ಶೀತದಿಂದಾಗಿ ಈ ಮಗು ಮೃತಪಟ್ಟಿದ್ದರೂ, ದೃಢ ನಿರ್ಧಾರದೊಂದಿಗೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಆ ಮಗುವಿನ ತಾಯಿ, ಇದು ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಎನ್ನುತ್ತಾರೆ. 

ಆ ಶಿಶುವಿನ  ಪೋಷಕರಾದ  ಮೊಹಮ್ಮದ್ ಆರಿಫ್ ಮತ್ತು ನಾಜಿಯಾ, ಬಟ್ಲಾ ಹೌಸ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಶೀಟ್  ಮತ್ತು ಬಟ್ಟೆಯೊಂದಿಗೆ ಒಂದು ಸಣ್ಣ ಗುಡಿಸಲಿನಲ್ಲಿ ಇಬ್ಬರು ಮಕ್ಕಳೊಂದಿಗೆ  ವಾಸಿಸುತ್ತಿದ್ದಾರೆ 

ಇವರು ಉತ್ತರ ಪ್ರದೇಶದ ಬರೇಲಿಯಿಂದ ಬಂದಿದ್ದು,  ಅರಿಫ್ ಎಂಬ್ರಾಯಿಡರ್ ಕೆಲಸದ ಜೊತೆಗೆ  ಇ- ರಿಕ್ಷಾ ಓಡಿಸುತ್ತಾರೆ. ಆತನ ಹೆಂಡತಿ ಎಂಬ್ರಾಯಿಡರ್ ಕೆಲಸಕ್ಕೆ ನೆರವು ನೀಡುತ್ತಾರೆ. 

ಕಸೂತಿ ಕೆಲಸದ ಜೊತೆಗೆ ಇ- ರಿಕ್ಷಾವನ್ನು ಓಡಿಸಿದರೂ ಕಳೆದ ತಿಂಗಳು ನಾನು ಸಾಕಷ್ಟು ಸಂಪಾದಿಸಲು ಸಾಧ್ಯವಾಗಲಿಲ್ಲ. ಈಗ ನಮ್ಮ ಮಗುವಿನ ಸಾವಿನೊಂದಿಗೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಹಸುಗೂಸು ಧರಿಸುತ್ತಿದ್ದ ಐ ಲವ್ ಮೈ ಇಂಡಿಯಾ ಎಂದು ಬರೆದಿದ್ದ ಉಣ್ಣೆಯ ಕ್ಯಾಪ್  ತೋರಿಸಿ ಅರಿಫ್ ಕಣ್ಣೀರಿಡುತ್ತಾರೆ.

ಪ್ರತಿಭಟನೆಯಿಂದ ಮರಳಿದ ನಂತರ ಜನವರಿ 30ರಂದು ರಾತ್ರಿ ನಿದ್ರೆಯಲ್ಲಿರುವಾಗಲೇ ಜಹಾನ್ ನಿಧನ ಹೊಂದಿದ್ದಾಗಿ ನಾಜಿಯಾ ದು:ಖಿತರಾದರು. ನಾಜಿಯಾ ಡಿಸೆಂಬರ್ 18ರಿಂದಲೂ ಪ್ರತಿದಿನವೂ ಜಹಾನ್ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 

ಸಿಎಎ ಹಾಗೂ ಎನ್ ಆರ್ ಸಿ ಎಲ್ಲಾ ಸಮುದಾಯಗಳ ವಿರೋಧಿಯಾಗಿದ್ದು, ಶಾಹೀನ್ ಭಾಗ್ ಪ್ರತಿಭಟನೆಯಲ್ಲಿ ಮತ್ತೆ ಪಾಲ್ಗೊಂಡಿರುವುದಾಗಿ ಹೇಳುವ ನಾಜಿಯಾ, ದೇಶದಲ್ಲಿನ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಧರ್ಮದ ಆಧಾರದ ಮೇಲೆ ವಿಭಜಿಸುವ ಸಿಎಎಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಆದರೆ, ನಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಈ ಕಾಯ್ದೆ ಏಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಮಗುವಿನ ಸಾವಿಗೆ ಸಿಎಎ ಹಾಗೂ ಎನ್ ಆರ್ ಸಿಯೇ ಕಾರಣ ಎಂದು ಅರೀಫ್ ದೂಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com