ರಂಗಭೂಮಿ ಕಲಾವಿದೆ ಸಂಜನಾ ಕಪೂರ್  ಗೆ 'ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಪ್ರಶಸ್ತಿ

ಖ್ಯಾತ ರಂಗಭೂಮಿ ಕಲಾವಿದೆಸಂಜನಾ ಕಪೂರ್ ಅವರು ರಂಗಭೂಮಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಫ್ರೆಂಚ್ ಗೌರವಕ್ಕೆ ಪಾತ್ರವಾಗಿದ್ದಾರೆ. ಫ್ರಾನ್ಸ್ ಅಸರ್ಕಾರದ ಅತ್ಯುನ್ನತ ಪ್ರಶಸ್ತಿಯಾಗಿರುವ "ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್" ಪ್ರಶಸ್ತಿ ಒಲಿದು ಬಂದಿದೆ. 
ಸಂಜನಾ ಕಪೂರ್
ಸಂಜನಾ ಕಪೂರ್

ಪ್ಯಾರೀಸ್: ಖ್ಯಾತ ರಂಗಭೂಮಿ ಕಲಾವಿದೆಸಂಜನಾ ಕಪೂರ್ ಅವರು ರಂಗಭೂಮಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಫ್ರೆಂಚ್ ಗೌರವಕ್ಕೆ ಪಾತ್ರವಾಗಿದ್ದಾರೆ. ಫ್ರಾನ್ಸ್ ಅಸರ್ಕಾರದ ಅತ್ಯುನ್ನತ ಪ್ರಶಸ್ತಿಯಾಗಿರುವ "ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್" ಪ್ರಶಸ್ತಿ ಒಲಿದು ಬಂದಿದೆ.

ಫ್ರೆಂಚ್ ಸಂಸ್ಕೃತಿ ಸಚಿವ ಫ್ರಾಂಕ್ ರೈಸ್ಟರ್, ಜನವರಿ 28 ರಂದು ನವದೆಹಲಿಯ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ವಿಶೇಷ ಹೂಡಿಕೆ ಸಮಾರಂಭದಲ್ಲಿ ಕಪೂರ್  ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸಂಜನಾ ಕಪೂರ್ ಪ್ರಸಿದ್ದ ಬಾಲಿವುಡ್ ನಟ ಶಶಿ ಕಪೂರ್ ವರ ಪುತ್ರಿ.ಇವರು ೩೬ ಟಾರಂಗೀ ಲೇನ್ ಚಿತ್ರದ ಮುಖೇನ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.2012ರಲ್ಲಿ ತಮ್ಮದೇ ಸ್ವಂತ ಜುನೋ ಥಿಯೇಟರ್ ಸ್ಥಾಪಿಸಿದ ಸಂಜನಾ ದೇಶಾದ್ಯಂತ ಸಂಚರಿಸಿ ನಾಟಕ, ರಂಗಭೂಮಿಯ ಏಳಿಗೆಗೆ ದುಡಿದರು.

ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್ ಪ್ರಶಸ್ತಿ ಕಿರು ಪರಿಚಯ

1957ರಲಿ ಸ್ಥಾಪಿತಆದ ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್ ಪ್ರಶಸ್ತಿ ಫ್ರೆಂಚ್ ಸರ್ಕಾರ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದು. ರಾಷ್ಟ್ರೀಯತೆಯನ್ನು ಲೆಕ್ಕಿಸದೆ  ಕಲೆ ಅಥವಾ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮ ಸೃಜನಶೀಲತೆಯಿಂದ ತಮ್ಮನ್ನು ಗುರುತಿಸಿಕೊಂಡ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಫ್ರಾನ್ಸ್ ಮತ್ತು ಪ್ರಪಂಚದಾದ್ಯಂತ ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಕೊಡುಗೆ. ನೀಡಿದವರಿಗೆ ಈ ಪ್ರಶಸ್ತಿ ಲಭಿಸುತ್ತದೆ.

ಇನ್ನು ಈ ಹಿಂದೆ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾದವರಲ್ಲಿ ಭಾರ್ತಿ ಖೇರ್, ಶಾರುಖ್ ಖಾನ್, ಹರಿಪ್ರಸಾದ್ ಚೌರಾಸಿಯಾ, ಐಶ್ವರ್ಯಾ ರೈ, ರಘು ರೈ, ಇಬ್ರಾಹಿಂ ಅಲ್ಕಾಜಿ, ಹಬೀಬ್ ತನ್ವೀರ್, ಉಪಮನ್ಯು ಚಟರ್ಜಿ, ವೆಂಡೆಲ್ ರೊಡ್ರಿಕ್ಸ್ ಮತ್ತು ಅರುಣಾ ವಾಸುದೇವ್. ಸಹ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com