ಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ

ಕೊಟ್ಟ ಹಣ ಮರಳಿ ಕೇಳಲು ಬಂದಿದ್ದ ರೈತರ ಮೇಲೆ ಗುತ್ತಿದಾರನ ಗುಂಪೊಂಡು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಿದ್ದೂ ಅಲ್ಲದೆ, ಬಳಿ ಅವರನ್ನು ಮಕ್ಕಳ ಕಳ್ಳರೆಂದು ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಗ್ರಾಮಸ್ಥರ ಮೂಲಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ. 
ಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ
ಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ

ಭೋಪಾಲ್: ಕೊಟ್ಟ ಹಣ ಮರಳಿ ಕೇಳಲು ಬಂದಿದ್ದ ರೈತರ ಮೇಲೆ ಗುತ್ತಿದಾರನ ಗುಂಪೊಂಡು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಿದ್ದೂ ಅಲ್ಲದೆ, ಬಳಿ ಅವರನ್ನು ಮಕ್ಕಳ ಕಳ್ಳರೆಂದು ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಗ್ರಾಮಸ್ಥರ ಮೂಲಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ. 

ಘಟನೆಯಲ್ಲಿ ಓರ್ವ ರೈತ ಸಾವನ್ನಪ್ಪಿದ್ದು, ಮತ್ತೈವರ ರೈತರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. 

ಸಂತ್ರಸ್ತರ ರೈತರು ಧರ್ ಜಿಲ್ಲೆಯ ಖಿರಾಕಿಯಾ ಎಂಬ ಗ್ರಾಮದ ಗುತ್ತಿಗೆದಾರನಿಗೆ ಕಾರ್ಮಿಕರ ಪೂರೈಕೆ ಮಾಡಲು ರೂ.2.5 ಲಕ್ಷ ನೀಡಿದ್ದರು. ಆದರೆ, ಆತ ಕಾರ್ಮಿಕರನ್ನು ಪೂರೈಕೆ ಮಾಡಿರಲಿಲ್ಲ. ಬಳಿಕ ಈ ಬಗ್ಗೆ ಗದ್ದಲ ಉಂಟಾಗಿ, ಗುತ್ತಿದಾರ ಕೇಲವ ರೂ.1 ಲಕ್ಷ ಮರಳಿಸಿದ್ದ. ಉಳಿದ ಹಣ ಪಡೆಯಲು ಬುಧವಾರ ಗ್ರಾಮಕ್ಕೆ ಬರುವಂತೆ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಹಣ ನೀಡಿದ್ದ 6 ರೈತರು 2 ಕಾರುಗಳಲ್ಲಿ ಖಿರಾಕಿಯಾ ಗ್ರಾಮಕ್ಕೆ ಬಂದಿದ್ದರು. ಆದರೆ, ಈ ವೇಲೆ ಮೊದಲೇ ಜನರನ್ನು ಸೇರಿಸಿದ್ದ ಗುತ್ತಿಗೆದಾರ, ಹಣ ಪಡೆಯಲು ಬಂದವರ ಮೇಲೆ ನೂರಾರು ಜನರ ಮೂಲಕ ದಾಳಿ ನಡೆಸಿದ್ದಾನೆ. 

ಈ ವೇಳೆ ರೈತರು ಕಾರಿನಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆದರೆ, ಗುತ್ತಿಗೆದಾರನ ಕಡೆಯವರು ಬೆನ್ನು ಬಿಡದೆ ತಾವೂ ಕೂಡ ಸುಮಾರು 25 ಕಿ.ಮೀ ದೂರದವರೆಗೆ ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ನಡುವೆ ಪರಾರಿಯಾಗುತ್ತಿದ್ದವರ ಕಾರು, ಜುನಾಪಾನಿ ಎಂಬ ಗ್ರಾಮದ ಬಳಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದೆ. ಆಗ, ಕಾರಿನಲ್ಲಿ ಇದ್ದವರು ಮಕ್ಕಳ ಕಳ್ಳರು ಎಂದು ಗುತ್ತಿಗೆದಾರ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. 

ಈ ಮಾತು ನಂಬಿದ ಜುನಾಪಾನಿ ಗ್ರಾಮಸ್ಥರು ಕೂಡ ಕಾರಿನಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಉಳಿದ ಐವರು ರೈತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com