ಕೊರೋನಾ ವೈರಸ್: ಸಾರ್ವಜನಿಕವಾಗಿ ಶೇಕ್ ಹ್ಯಾಂಡ್, ಹೆಪ್ಪಾದ ಮಾಂಸ ಸೇವನೆಗೆ ಕಡಿವಾಣ ಹಾಕಿ- ದೆಹಲಿ ಸರ್ಕಾರ ಆರೋಗ್ಯ ಸಲಹೆ

ಮಾರಣಾಂತಿಕ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೆಪ್ಪಾದ ಮಾಂಸ ಸೇವನೆಗೆ ಕಡಿವಾಣ ಹಾಕುವುದು ಸೇರಿದಂತೆ ಸಾರ್ವಜನಿಕರು ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ದೆಹಲಿ ಸರ್ಕಾರ ಬುಧವಾರ ಆರೋಗ್ಯ ಸಲಹೆಯನ್ನು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಮಾರಣಾಂತಿಕ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೆಪ್ಪಾದ ಮಾಂಸ ಸೇವನೆಗೆ ಕಡಿವಾಣ ಹಾಕುವುದು ಸೇರಿದಂತೆ ಸಾರ್ವಜನಿಕರು ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ದೆಹಲಿ ಸರ್ಕಾರ ಬುಧವಾರ ಆರೋಗ್ಯ ಸಲಹೆಯನ್ನು ನೀಡಿದೆ.

ವೈರಸ್‌ಗೆ ಸಂಬಂಧಿಸಿದಂತೆ ಮಾಹಿತಿ ನೀಡಲು  ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಕೇಂದ್ರ ಕಚೇರಿಯಲ್ಲಿಯಲ್ಲಿ ಸಹಾಯವಾಣಿಯೊಂದನ್ನು ತೆರೆಯಲಾಗಿದೆ.

ಚೀನಾದ ಹುಬೈ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಮೂರು ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ

ಕೊರೋನಾ ವೈರಸ್ ರೋಗ ಲಕ್ಷಣಗಳು:
ಜ್ವರ, ಉಸಿರಾಟಕ್ಕೆ ತೊಂದರೆ, ಕೆಮ್ಮುವುದು, ಎದೆನೋವು, ನ್ಯೂಮೊನಿಯಾ, ಕಿಡ್ನಿ ತೊಂದರೆ 

ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
* ಸೋಪು ಮತ್ತು ನೀರಿನಿಂದ ಕೈಗಳನ್ನು ಶುಚಿಗೊಳಿಸಬೇಕು
* ಕೆಮ್ಮುವಾಗ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಿ
*  ಸೀನುವಾಗ ಅಡ್ಡ ಕರ ವಸ್ತ್ರ ಅಥವಾ ಇನ್ನಿತರ ವಸ್ತ್ರಗಳನ್ನು ಬಳಸಿ
* ಶೀತ ಅಥವಾ ಜ್ವರ ತರಹದ ರೋಗಲಕ್ಷಣಗಳು ಇರುವ ವ್ಯಕ್ತಿಗಳೊಂದಿಗಿನ ಸಂಪರ್ಕ ಕಳೆದುಕೊಳ್ಳುವುದು
* ಹೆಪ್ಪು ಗಟ್ಟಿದ ಮಾಂಸ ಸೇವೆನೆ ಮಾಡಬೇಡಿ

ಏನನ್ನು ಮಾಡಬೇಕು
* ಆಗಾಗ್ಗೆ ಸೋಪು ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛಗೊಳಿಸಿ
* ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಹೋಗಬೇಡಿ
* ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರ ಉಳಿಯುವುದು ಲೇಸು
* ಹಿತವಾಗಿ ನಿದ್ರಿಸಿ, ಸೂಕ್ತವಾಗಿ ವಿರಾಮ ಪಡೆಯಿರಿ
* ಸಾಕಷ್ಟು ನೀರು ಕುಡಿಯಿರಿ ಮತ್ತು ದ್ರವ, ಪೌಷ್ಟಿಕ ಆಹಾರವನ್ನು ಸೇವಿಸಬೇಕು

ಏನನ್ನು ಮಾಡಬಾರದು
* ಕೈ ತೊಳೆಯದೆ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು
* ತಬ್ಬಿಕೊಳ್ಳುವುದು, ಕಿಸ್ಸಿಂಗ್ ಮಾಡುವುದು ಹಾಗೂ ಸಾರ್ವಜನಿಕವಾಗಿ ಶೇಕ್ ಹ್ಯಾಂಡ್ ಮಾಡುವುದನ್ನು ಕಡಿಮೆ ಮಾಡಿ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
* ಅತಿಯಾಗಿ ದೈಹಿಕ ವ್ಯಾಯಾಮ ಮಾಡಬಾರದು, ಬಳಸಲಾದ ನ್ಯಾಪ್ ಕಿನ್ ನ್ನು ವಿಲೇವಾರಿ ಮಾಡಬೇಕು
* ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತ್ಯಜಿಸಿ, ರೈಲು ಮತ್ತಿತರ ಕಡೆಗಳಲ್ಲಿ ಮೇಲೆ ಬೀಳುವುದು, ಬಾಗಿಲು ಮುಟ್ಟುವುದನ್ನು ಆಗಾಗ್ಗೆ ಮಾಡಬಾರದು
 
ದೆಹಲಿ ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಕೇಂದ್ರ ಕಚೇರಿಯಲ್ಲಿಯಲ್ಲಿ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಸಲಹೆ, ಮಾಹಿತಿ ನೀಡಲು  ಸಹಾಯವಾಣಿ-011-22307145, 22300012, 22300036 ಆರಂಭಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com