ಎನ್ ಪಿಆರ್ ಗೆ ರಾಜ್ಯಸಭೆಯಲ್ಲಿ ಮೋದಿ ಸಮರ್ಥನೆ: ಕೊಟ್ಟ ಕಾರಣಗಳು ಹೀಗಿವೆ

ರಾಜ್ಯಸಭಾ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ನ್ನು ಸಮರ್ಥಿಸಿಕೊಂಡಿದ್ದಾರೆ. 
ಎನ್ ಪಿಆರ್ ಗೆ ರಾಜ್ಯಸಭೆಯಲ್ಲಿ ಮೋದಿ ಸಮರ್ಥನೆ: ಕೊಟ್ಟ ಕಾರಣಗಳು ಹೀಗಿವೆ
ಎನ್ ಪಿಆರ್ ಗೆ ರಾಜ್ಯಸಭೆಯಲ್ಲಿ ಮೋದಿ ಸಮರ್ಥನೆ: ಕೊಟ್ಟ ಕಾರಣಗಳು ಹೀಗಿವೆ

ನವದೆಹಲಿ: ರಾಜ್ಯಸಭಾ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ನ್ನು ಸಮರ್ಥಿಸಿಕೊಂಡಿದ್ದಾರೆ. 

"2010 ರಲ್ಲಿ ಮೊದಲ ಬಾರಿಗೆ ಎನ್.ಪಿ.ಆರ್ ನ್ನು ಜಾರಿಗೆ ತರಲಾಗಿತ್ತು. 2015 ರಲ್ಲಿ ಅಪ್ ಡೇಟ್ ಮಾಡಲಾಗಿತ್ತು. ಎನ್ ಪಿ ಆರ್ ಹಾಗೂ ಜನಗಣತಿಗಳು ಈ ಹಿಂದೆಯೂ ಮಾಡಲಾಗಿರುವ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಷ್ಟೇ. ಆದರೆ ಈಗ ಏಕಾಏಕಿ ಅದು ವಿವಾದಾಸ್ಪದವಾಗಿಬಿಟ್ಟಿದೆ ಎಂದು ಮೋದಿ ಯೋಜನೆಯ ವಿರೋಧಿಗಳಿಗೆ ತಿವಿದಿದ್ದಾರೆ. 

ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯಗಳು ಸೂಕ್ತ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದಕ್ಕಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ ಪಿಆರ್) ನ್ನು ಅಪ್ ಡೇಟ್ ಮಾಡುವುದು ಅಗತ್ಯವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಎನ್ ಪಿಆರ್ ಗೆ ಸಂಬಂಧಿಸಿದಂತೆ ಬರುವ ಪ್ರಶ್ನೆಗಳು ಸಂಪೂರ್ಣ ಆಡಳಿತಾತ್ಮಕವಾದದ್ದು ಜನರನ್ನು ದಾರಿ ತಪ್ಪಿಸಲು ಯತ್ನಿಸಬೇಡಿ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮೋದಿ ವಿಪಕ್ಷಗಳಿಗೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com