ಸಿಎಎ ವಿರುದ್ಧ ಫೋನ್ ನಲ್ಲಿ ಆಕ್ರೋಶಭರಿತ ಮಾತು: ಕೆಂಡಾಮಂಡಲಗೊಂಡು ಪ್ರಯಾಣಿಕನನ್ನು ಠಾಣೆಗೆ ಕರೆದೊಯ್ದ ಕ್ಯಾಬ್ ಚಾಲಕ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರುದ್ಧ ಮೊಬೈಲ್ ನಲ್ಲಿ ಅಕ್ರೋಶಭರಿತವಾಗಿ ಪ್ರಯಾಣಿಕನೋರ್ವ ಮಾತನಾಡುತ್ತಿದ್ದುದ್ದನ್ನು ಕೇಳಿದ ಕ್ಯಾಬ್ ಚಾಲಕನೊಬ್ಬ ಕೆಂಡಾಮಂಡಲಗೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. 
ಸಿಎಎ ವಿರುದ್ಧ ಫೋನ್ ನಲ್ಲಿ ಆಕ್ರೋಶಭರಿತ ಮಾತು: ಕೆಂಡಾಮಂಡಲಗೊಂಡು ಪ್ರಯಾಣಿಕನನ್ನು ಠಾಣೆಗೆ ಕರೆದೊಯ್ದ ಕ್ಯಾಬ್ ಚಾಲಕ
ಸಿಎಎ ವಿರುದ್ಧ ಫೋನ್ ನಲ್ಲಿ ಆಕ್ರೋಶಭರಿತ ಮಾತು: ಕೆಂಡಾಮಂಡಲಗೊಂಡು ಪ್ರಯಾಣಿಕನನ್ನು ಠಾಣೆಗೆ ಕರೆದೊಯ್ದ ಕ್ಯಾಬ್ ಚಾಲಕ

ಮುಂಬೈ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರುದ್ಧ ಮೊಬೈಲ್ ನಲ್ಲಿ ಅಕ್ರೋಶಭರಿತವಾಗಿ ಪ್ರಯಾಣಿಕನೋರ್ವ ಮಾತನಾಡುತ್ತಿದ್ದುದ್ದನ್ನು ಕೇಳಿದ ಕ್ಯಾಬ್ ಚಾಲಕನೊಬ್ಬ ಕೆಂಡಾಮಂಡಲಗೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. 

ಈ ಕುರಿತು ಇಂಡಿಯೋ ಪ್ರೋಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿದ್ದಾರೆ. ಮುಂಬೈನಲ್ಲಿ ಬುಧವಾರ ರಾತ್ರಿ ಉಬರ್ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಬಪ್ಪಾದಿತ್ಯ ಸರ್ಕಾರ್ ಎಂಬ ಕವಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಬುಧವಾರ ರಾತ್ರಿ 10 ಗಂಟೆಗೆ ಮುಂಬೈನ ಜುಹು ಪ್ರದೇಶದಿಂದ ಕುರ್ಲಾದಲ್ಲಿರುವ ತಮ್ಮ ರೂಮಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದ. ಬಪ್ಪಾದಿತ್ಯ ಕ್ಯಾಬ್ ನಲ್ಲಿ ಕುಳಿತು ತಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಬಪ್ಪಾದಿತ್ಯ ಸರ್ಕಾರ್ ಪೌರತ್ವ ಕಾಯ್ದೆ ವಿರುದ್ಧ ಮಾತನಾಡಲು ಆರಂಭಿಸಿದ್ದ. ದೆಹಲಿಯ ಶಾಹೀನಾ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಂತೆ ಮುಂಬೈನಲ್ಲೂ ಪ್ರತಿಭಟನೆ ನಡೆಸಬೇಕೆಂದು ಹೇಳಿದ್ದ. 

ಈ ಸಂಭಾಷಣೆಯನ್ನು ಕೇಳುತ್ತಿದ್ದ ಕ್ಯಾಬ್ ಚಾಲಕ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದಾ? ಎಂದು ಬಪ್ಪಾದಿತ್ಯಾ ಅವರ ಬಳಿ ಕೇಳಿದ್ದ. ಅದಕ್ಕೆ ಒಪ್ಪಿಗೆ ಸೂಚಿಸಿದ ಬಪ್ಪಾದಿತ್ಯ ಮೊಬೈಲ್ ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆಗ ಇಬ್ಬರು ಪೊಲೀಸರೊಂದಿಗೆ ವಾಪಾಸ್ ಬಂದಿರುವ ಕ್ಯಾಬ್ ಚಾಲಕ ತನ್ನ ಗ್ರಾಹಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈತ ದೇಶ ವಿರೋಧಿಯಾಗಿ ಮಾತನಾಡುತ್ತಿದ್ದು, ತಾನು ಆ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೇನೆಂದು ಹೇಳಿದ್ದಾನೆ. 

ಜೈಪುರ ಮೂಲದವರಾಗಿರುವ ಬಪ್ಪಾದಿತ್ಯ ಮುಂಬೈನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಬಪ್ಪಾದಿತ್ಯಾರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿರುವ ಚಾಲಕ, ಅವರ ಮೇಲೆ ಆರೋಪಗಳನ್ನು ಮಾಡಿದ್ದಾರೆ. 

ಹಿಂದಿನ ಸೀಟಿನಲ್ಲಿ ಕುಳಿತ ಈತ ದೇಶ ವಿರೋಧಿ ಮಾತುಗಳನ್ನಾಡುತ್ತಿದ್ದ. ತಾನೊಬ್ಬ ಕಮ್ಯುನಿಸ್ಟ್ ಎಂದು ಹೇಳುತ್ತಿದ್ದ. ಈತ ದೇಶಕ್ಕೆ ಬೆಂಕಿ ಹಚ್ಚುವ ಬಗ್ಗೆ ಮಾತನಾಡುತ್ತಿದ್ದ. ಇಂತಹವರಿಂದಲೇ ದೇಶ ನಾಶವಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದ್ದಾರೆ. 

ಘಟನೆ ಬಳಿಕ ಹೋರಾಟಗಾರ ಗೋಹಿಲ್ ಅವರು ಠಾಣೆಗೆ ಆಗಮಿಸಿ ಬಪ್ಪಾದಿತ್ಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎಚ್ಚರಿಕೆ ನೀಡಿರುವ ಪೊಲೀಸರು ಯಾವುದೇ ಕಾರಣಕ್ಕೂ ಕೆಂಪು ಸ್ಕಾರ್ಫ್ ಧರಿಸಂತೆ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com