ಮುಂಬೈ: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪೋಟೋ ಜರ್ನಲಿಸ್ಟ್ ಥಳಿಸಿದ ಪೊಲೀಸರು 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಗರದ ಟ್ಯಾಬ್ಲಾಯ್ಡ್ ವೊಂದರ  ಪೋಟೋ ಜರ್ನಲಿಸ್ಟ್ ಒಬ್ಬರನ್ನು ಪೊಲೀಸರು ಥಳಿಸಿರುವ ಘಟನೆ ಗುರುವಾರ ನಡೆದಿದೆ
ಹಲ್ಲೆಗೊಳಗಾದ ಪೋಟೋ ಜರ್ನಲಿಸ್ಟ್
ಹಲ್ಲೆಗೊಳಗಾದ ಪೋಟೋ ಜರ್ನಲಿಸ್ಟ್

ಮುಂಬೈ:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಗರದ ಟ್ಯಾಬ್ಲಾಯ್ಡ್ ವೊಂದರ  ಪೋಟೋ ಜರ್ನಲಿಸ್ಟ್ ಒಬ್ಬರನ್ನು ಪೊಲೀಸರು ಥಳಿಸಿರುವ ಘಟನೆ ಗುರುವಾರ ನಡೆದಿದೆ

ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿಕೆ ನೀಡಿರುವಂತೆ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಶಾಹೀನ್ ಬಾಗ್ ರೀತಿಯಲ್ಲಿ ನಾಗಪಾಡ ಪ್ರದೇಶದಲ್ಲಿ ಮಹಿಳೆಯರು ಕಳೆದ 12 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಮುಂಬೈ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಆಗಿರುವ ಅಶಿಶ್ ರಾಜಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದಾಗ ಇಬ್ಬರು ಪೊಲೀಸ್ ಅಧಿಕಾರಿಗಳು ತಳ್ಳಿ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ರಾಜೆ ಅವರ ತೊಡೆ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿಯೇ ಇದ್ದ ಮತ್ತೋರ್ವ ಪೋಟೋ ಜರ್ನಲಿಸ್ಟ್ ಹೇಳಿದ್ದಾರೆ

ಈ ವಿಚಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ ಹೇಳಿದ್ದಾರೆ. ಇದೊಂದು ಭಯಾನಕ ಕೃತ್ಯವಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ದೇಶ್ ಮುಖ್ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com