ದೆಹಲಿ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ: ಸಿಎಂ ಕೇಜ್ರಿವಾಲ್ ವಿಶ್ವಾಸ

ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಸಿವಿಲ್ ಲೈನ್ಸ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು.
ಮತದಾನ ಮಾಡಿದ ಬಂದ ಸಿಎಂ ಕೇಜ್ರಿವಾಲ್
ಮತದಾನ ಮಾಡಿದ ಬಂದ ಸಿಎಂ ಕೇಜ್ರಿವಾಲ್

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಸಿವಿಲ್ ಲೈನ್ಸ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸರ್ಕಾ‍ರದ ಪ್ರಗತಿ ಪರ ಕಾರ್ಯಗಳನ್ನು ಪರಿಗಣಿಸಿಜನರು ಮತ ಚಲಾಯಿಸುತ್ತಾರೆ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳೆಯರು ತಪ್ಪದೆ ಮತ ಚಲಾಯಿಸಿ
ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಆಮ್ ಆದ್ಮಿ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿಮಾಡಿದ್ದಾರೆ. "ನಿಮ್ಮ ಮನೆಯ ಜವಾಬ್ದಾರಿಯನ್ನು ನೀವು ಹೊತ್ತುಕೊಂಡಂತೆಯೇ, ದೇಶ ಮತ್ತು ದೆಹಲಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ. ಎಲ್ಲಾ ಮಹಿಳೆಯರು ಮತ ಚಲಾಯಿಸಲು ಹೋಗಬೇಕು ಮತ್ತು ಅವರ ಮನೆಯ ಪುರುಷರನ್ನು ಸಹ ಕರೆದೊಯ್ಯಬೇಕು" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com