ಕಮಾಂಡ್ ಪೋಸ್ಟ್ ನಿರಾಕರಣೆ ಧೈರ್ಯಶಾಲಿ ಅಧಿಕಾರಿಗಳ ಘನತೆಗೆ ಘಾಸಿ: ಮಹಿಳಾ ಸೇನಾಧಿಕಾರಿಗಳ ಅಸಮಾಧಾನ

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಕ್ಗೆ ಪರ್ಮನೆಂಟ್ ಕಮಿಷನ್ ನೀತಿ ರೂಪಿಸುವುದಕ್ಕೆ ತಡ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಮಹಿಳಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಕಮಾಂಡ್ ಪೋಸ್ಟ್ ನಿರಾಕರಣೆ ಧೈರ್ಯಶಾಲಿ ಅಧಿಕಾರಿಗಳ ಘನತೆಗೆ ಘಾಸಿ: ಮಹಿಳಾ ಸೇನಾಧಿಕಾರಿಗಳ ಅಸಮಾಧಾನ
ಕಮಾಂಡ್ ಪೋಸ್ಟ್ ನಿರಾಕರಣೆ ಧೈರ್ಯಶಾಲಿ ಅಧಿಕಾರಿಗಳ ಘನತೆಗೆ ಘಾಸಿ: ಮಹಿಳಾ ಸೇನಾಧಿಕಾರಿಗಳ ಅಸಮಾಧಾನ

ನವದೆಹಲಿ: ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ನೀತಿ ರೂಪಿಸುವುದಕ್ಕೆ ತಡ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಮಹಿಳಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಹಿಳಾ ಅಧಿಕಾರಿಗಳು ತಮ್ಮ ಧೈರ್ಯ ಸಾಹಸಗಳನ್ನು ಸಾಬೀತುಪಡಿಸಿದ್ದಾರೆ. ಸತತ 30 ವರ್ಷಗಳ ಸೇನೆಯಲ್ಲಿ ಸತ್ವ ಪರೀಕ್ಷೆ ಎದುರಿಸಿದ್ದಾರೆ. ಸೈನಿಕರು/ ಪುರುಷರು ಮಹಿಳಾ ಅಧಿಕಾರಿಗಳ ಕಮಾಂಡ್ ನ್ನು ನಿರಾಕರಿಸಿರುವ ಉದಾಹರಣೆಗಳಿಲ್ಲ ಎಂದು ಮಹಿಳಾ ಅಧಿಕಾರಿಗಳು ಲಿಖಿತ ರೂಪದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 

ಸೇನೆಯಲ್ಲಿ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್(ಪಿಸಿ) ನೀಡಬೇಕೆಂದು ಆಗ್ರಹಿಸಿ ಮಹಿಳಾ ಅಧಿಕಾರಿಗಳ ಪರವಾಗಿ ಹಿರಿಯ ಅಡ್ವೊಕೇಟ್ ಐಶ್ವರ್ಯಾ ಭಾಟಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಭಾಗವಾಗಿ ಮಹಿಳಾ ಅಧಿಕಾರಿಗಳು ಲಿಖಿತ ರೂಪದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

10 ಕಾಂಬಾಟ್ ಸಪೀರ್ಟ್ ಆರ್ಮ್ಸ್ ನಲ್ಲಿ ಮಹಿಳಾ ಅಧಿಕಾರಿಗಳು ಕಳೆದ 27-28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಧೈರ್ಯ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಕಮಾಂಡ್ ನೇಮಕಾತಿಯನ್ನು ನಿರಾಕರಣೆ ಮಾಡುವುದರಿಂದ ಧೈರ್ಯಶಾಲಿ ಅಧಿಕಾರಿಗಳ ಘನತೆಗೆ ಘಾಸಿ ಉಂಟಾಗುತ್ತದೆ ಎಂದು ವಕೀಲರು ವಾದ ಮಂಡಿಸಿದ್ದಾರೆ. 

ವಿಚಾರಣೆ ಆಲಿಸಿರುವ ಡಿವೈ ಚಂದ್ರಚೂಡ್, ಅಜಯ್ ರಸ್ತೋಗಿ ಅವರಿದ್ದ ಸುಪ್ರೀಂ ಕೋಟ್ ವಿಭಾಗೀಯ ಪೀಠ, ಈ ಕುರಿತ ಆದೇಶವನ್ನು ಕಾಯ್ದಿರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com