ಬಂಧನದ ಹೊರತಾಗಿಯೂ ಟಿಫನ್ ಬಾಕ್ಸ್ ಮೂಲಕ ಮಗಳೊಂದಿಗೆ ಮಾತನಾಡುತ್ತಿದ್ದ ಮೆಹಬೂಬಾ ಮುಫ್ತಿ!

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370ರದ್ಧತಿ ಬಳಿಕ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ರಾಜಕೀಯವಾಗಿ ಸಕ್ರಿಯರಾಗಿರುವ ತಮ್ಮ ಮಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದರು ಎಂಬ ವಿಚಾರ ನಿಧಾನವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370ರದ್ಧತಿ ಬಳಿಕ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ರಾಜಕೀಯವಾಗಿ ಸಕ್ರಿಯರಾಗಿರುವ ತಮ್ಮ ಮಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದರು ಎಂಬ ವಿಚಾರ ನಿಧಾನವಾಗಿ ಬೆಳಕಿಗೆ ಬಂದಿದೆ.

ಹೌದು.. ಬಂಧನದಲ್ಲಿರುವ ಕಾಶ್ಮೀರದ ರಾಜಕೀಯ ನಾಯಕರಿಗೆ ಮನೆ ಊಟದ ಅವಕಾಶ ನೀಡಲಾಗಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಮೆಹಬೂಬಾ ಮುಫ್ತಿ ಅವರು ಟಿಫನ್ ಬಾಕ್ಸ್ ನಲ್ಲಿ ಚೀಟಿಗಳನ್ನು ಇಟ್ಟು ತಮ್ಮ ಮನೆಗೆ ಕಳುಹಿಸುತ್ತಿದ್ದರು. ಚೀಟಿಯಲ್ಲಿರುವ ವಿಷಯಗಳನ್ನು ಓದುತ್ತಿದ್ದ ಅವರ ಪುತ್ರಿ ಇಲ್ತಿಜಾ ಅವರು ಚಪಾತಿಯಲ್ಲಿ ಸಂದೇಶ ಬರೆದು ಬಾಕ್ಸಿಗೆ ಹಾಕಿ ರವಾನೆ ಮಾಡುತ್ತಿದ್ದರಂತೆ. ಚಪಾತಿ ಮೇಲಿನ ಸಂದೇಶಗಳನ್ನು ಓದಿ ಮೆಹಬೂಬಾ ಅದನ್ನು ತಿನ್ನುತ್ತಿದ್ದರಂತೆ.

ಈ ಕುರಿತಂತೆ ಮೆಹಬೂಬಾ ಅವರ ಟ್ವಿಟರ್ ಖಾತೆಯಲ್ಲಿ ಬರೆದಿರುವ ಇಲ್ತಿಜಾ ಅವರು, ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮ್ಮ ಬಾಕ್ಸ್ ನಲ್ಲಿ ಕಳುಹಿಸುತ್ತಿದ್ದ ಚೀಟಿಗಳನ್ನು ಓದಿ ನಾನು ಅದಕ್ಕೆ ಚಪಾತಿಗಳ ಮೂಲಕ ಉತ್ತರಿಸುತ್ತಿದ್ದೆ. ನಾನು ಚೀಟಿಯಲ್ಲಿ ಉತ್ತರ ಬರೆದು ಚಪಾತಿಯ ಮಧ್ಯಭಾಗದಲ್ಲಿ ಇಟ್ಟು ಕಳುಹಿಸುತ್ತಿದ್ದೆ ಎಂದು ಹೇಳಿದ್ದಾರೆ.

ಮೊದಲ ಚೀಟಿಯಲ್ಲಿ ಮೆಹಬೂಬ ಅವರು ಟ್ವಿಟರ್ ಖಾತೆ ನಿರ್ವಹಣೆ ಕುರಿತು ಮಾತನಾಡಿದ್ದರಂತೆ. ನಾನು ಟ್ವಿಟರ್ ಖಾತೆಯನ್ನು ಬಳಕೆ ಮಾಡುತ್ತಿಲ್ಲ. ಒಂದು ವೇಳೆ ಯಾರಾದರೂ ನನ್ನ ಖಾತೆಯನ್ನು ಬಳಕೆ ಮಾಡಿದ್ದರೆ ಕ್ರಮ ಜರುಗಿಸುವಂತೆ ಮಗಳಿಗೆ ನಿರ್ದೇಶನ ನೀಡಿದ್ದರಂತೆ. ಪ್ರಸ್ತುತ ತಮ್ಮ ತಾಯಿಯೊಂದಿಗೆ ಮಾತನಾಡುವ ಎಲ್ಲ ಸಂಪರ್ಕಗಳನ್ನೂ ನಾನು ಕಳೆದುಕೊಂಡಿದ್ದೇನೆ ಎಂದು ಇಲ್ತಿಜಾ ಹೇಳಿದ್ದಾರೆ. ವಾರದಲ್ಲಿ 2 ಬಾರಿ ಮಾತ್ರ ಮೆಹಬೂಬಾ ಅವರು ಕುಟುಂಬಸ್ಥರನ್ನು ಭೇಟಿ ಮಾಡಬಹುದು ಎಂದು ಹೇಳಿದ್ದಾರೆ.

ಇನ್ನು ಹಾಲಿ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ಇಲ್ತಿಜಾ, ಕೇಂದ್ರ ಸರ್ಕಾರದ ವಿರುದ್ಧ ಯಾರೇ ಧನಿ ಎತ್ತಿದರೂ ಅವರ ವಿರುದ್ಧ ದೇಶದ್ರೋಹ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಕೆಲ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ದೇಶದ್ರೋಹಿ ಮತ್ತು ಸಮಾಜ ವಿದ್ರೋಹಿಗಳನ್ನಾಗಿ ಬಿಂಬಿಸಲಾಗುತ್ತಿದೆ. ಕಾಶ್ಮೀರಿಗರನ್ನು ಮತ್ತು ಮುಸ್ಲಿಮರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಟೀಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಪಬ್ಲಿಕ್ ಸೇಫ್ಟಿ ಆಕ್ಟ್ ನಡಿ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com