ಮುಂಬೈ: ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು ಬೆಂಕಿ ಅವಘಡ, 7 ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ನವೀ ಮುಂಬಯಿಯ 21 ಅಂತಸ್ತಿನ ವಸತಿ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಏಳು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಮುಂಬೈ: ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು ಬೆಂಕಿ ಅವಘಡ, 7 ಅಗ್ನಿಶಾಮಕ ಸಿಬ್ಬಂದಿಗೆ ಗಾಯ

ಥಾಣೆ(ಮಹಾರಾಷ್ಟ್ರ): ನವೀ ಮುಂಬಯಿಯ 21 ಅಂತಸ್ತಿನ ವಸತಿ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಏಳು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು , ಪಾಮ್ ಬೀಚ್ ರಸ್ತೆ ಬಳಿಯ ಸೀವುಡ್ ನಲ್ಲಿರುವ  ಸೀ ಹೋಮ್ ಅಪಾರ್ಟ್ ಮೆಂಟಿನ  ಮೇಲಿನ ಎರಡು ಮಹಡಿಗಳಲ್ಲಿರುವ ಡ್ಯುಪ್ಲೆಕ್ಸ್ ಫ್ಲ್ಯಾಟ್ ನಲ್ಲಿ ಅನಾಹುತವನ್ನು ಸೃಷ್ಟಿಸಿದೆ. 

ಗಾಯಗೊಂಡ ಏಳು ಮಂದಿಯನ್ನು ಏರೋಲಿಯ ನ್ಯಾಷನಲ್ ಬರ್ನ್ಸ್ ಸೆಂಟರ್ (ಎನ್‌ಬಿಸಿ) ಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಡ್ಯುಪ್ಲೆಕ್ಸ್ ಫ್ಲಾಟ್‌ನಲ್ಲಿ ಸಿಲಿಂಡರ್ ಸ್ಫೋಟವಾಗಿ ಮೇಲಿನ ಎರಡು ಮಹಡಿಗಳಿಗೆ ಹರಡಿದೆ. , ಬೆಳಿಗ್ಗೆ 6.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ" ಎಂದು ನವೀ ಮುಂಬೈ ವಿಪತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ದಾದಾಸಾಹೇಬ್ ಚಬುಕ್ಸ್ ವರ್ ಹೇಳಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ (ಟಿಎಂಸಿ) ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ (ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್ ಕದಮ್ ಅವರ ಪ್ರಕಾರ, ಬೆಂಕಿಯನ್ನು ನಿಯಂತ್ರಿಸಲು ನೆರೂಲ್, ಸಿಬಿಡಿ ಬೆಲಾಪುರ ಮತ್ತು ವಾಶಿ ಅಗ್ನಿಶಾಮಕ ಕೇಂದ್ರಗಳಿಂದ ಆರು ಅಗ್ನಿಶಾಮಕ ಯಂತ್ರಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಸಧ್ಯ ಬೆಂಕಿ ನಂದಿಸಲಾಗಿದ್ದು , ಕೂಲಿಂಗ್ ಕಾರ್ಯಾಚರಣೆ ನಡೆಯುತ್ತಿದೆ.ಘಟನೆ ಸಂಬಂಧ ವಿವರವಾದ ತನಿಖೆ ಕೈಗೊಳ್ಲಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com